ಜನ-ಮನ ಗೆದ್ದ ‘ಅಂತರಾಳ’ದ ಗೀತೆಗಳು

ಬುಧವಾರ, ಜೂನ್ 19, 2019
31 °C

ಜನ-ಮನ ಗೆದ್ದ ‘ಅಂತರಾಳ’ದ ಗೀತೆಗಳು

Published:
Updated:
ಜನ-ಮನ ಗೆದ್ದ ‘ಅಂತರಾಳ’ದ ಗೀತೆಗಳು

'ಅಂತರಾಳ' ಸಂಸ್ಥೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಆಯೋಜಿಸಿದ್ದ ಡಾ.ದೊಡ್ಡರಂಗೇಗೌಡರ ಜನಪ್ರಿಯ ಗೀತೆಗಳ ಕಾರ್ಯಕ್ರಮ 'ನಿನ್ನ ರೂಪು ಎದೆಯ ಕಲಕಿ' ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಯಿತು.

ಗೌಡರನ್ನು ಹೂಮಳೆಯೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ತುಂಬಿದ ಸಭೆಯ ಅಭಿಮಾನದ ಗೌರವಕ್ಕೆ, ಸ್ವಾಗತಕ್ಕೆ ದೊಡ್ಡರಂಗೇಗೌಡರು ಭಾವುಕರಾದರು. ತಮ್ಮ ಚಿತ್ರ ಸಾಹಿತ್ಯ ಪಯಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಸಿನಿಕ್ಷೇತ್ರದ ದಿಗ್ಗಜರಾದ ಚಿನ್ನೇಗೌಡರು, ಸಂಗೀತ ನಿರ್ದೇಶಕ ರಾಜನ್, ನಟ ಸಂಚಾರಿ ವಿಜಯ್ ದೀಪ ಬೆಳಗುವ ಮೂಲಕ ಹಾಗೂ ಶಶಿಧರ್ ಕೋಟೆ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.

ರಾಮಚಂದ್ರ ಹಡಪದ್ ಮತ್ತು ಶ್ವೇತಾ ಪ್ರಭು ಅವರ ಭಾವಪೂರ್ಣ ಗಾಯನ ಪ್ರೇಕ್ಷಕರ ಮನಸೂರೆಗೊಂಡವು.

ಸಿ.ಅಶ್ವಥ್ ಅವರ ಜೊತೆ ನಿಕಟ ಸಂಪರ್ಕವಿದ್ದ ದೊಡ್ಡರಂಗೇಗೌಡರು, ಹಡಪದ್ ಅವರ ಸಂಗೀತಕ್ಕೆ ಮನಸೋತು 'ಅಭಿನವ ಅಶ್ವಥ್' ಎಂದು ಶ್ಲಾಘಿಸಿದರು. 

ಸಿನಿಕ್ಷೇತ್ರದ ದಿಗ್ಗಜರಾದ ಚಿನ್ನೇಗೌಡರು, ಸಂಗೀತ ನಿರ್ದೇಶಕ ರಾಜನ್, ನಟ ಸಂಚಾರಿ ವಿಜಯ್ ದೀಪ ಬೆಳಗುವ ಮೂಲಕ ಹಾಗೂ ಶಶಿಧರ್ ಕೋಟೆ ಗಾಯನದ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry