ಇವರೂ ಹೀಗಾದ್ರಾ...

ಭಾನುವಾರ, ಮೇ 26, 2019
31 °C

ಇವರೂ ಹೀಗಾದ್ರಾ...

Published:
Updated:
ಇವರೂ ಹೀಗಾದ್ರಾ...

ಟಾಲಿವುಡ್‌ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಪ್ರಭಾಸ್‌ ಅಭಿಮಾನಿಗಳ ಜಾಣ ವರ್ತನೆ ಇಷ್ಟವಾಗುತ್ತದೆ. ಸಿನಿಮಾ ಪ್ರಚಾರ ಅಥವಾ ಸಿನಿ ಜಗತ್ತಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿರಲಿ ಪವನ್‌ ಕಲ್ಯಾಣ್ ಅಭಿಮಾನಿಗಳು ತಮ್ಮ ಸ್ಟಾರ್‌ನಟನ ಬಗ್ಗೆಯೇ ಎಲ್ಲರೂ ಮಾತನಾಡಬೇಕು ಎಂದು ಅಪೇಕ್ಷಿಸುವುದು, ಅದಕ್ಕಾಗಿ ಪುಂಡಾಡಿಕೆ ಮಾಡುವುದು ವಾಡಿಕೆಯೇ ಆಗಿಬಿಟ್ಟಿದೆ.

ಈಗ ಪ್ರಭಾಸ್‌ ಅಭಿಮಾನಿಗಳೂ ಇದೇ ಸಾಲಿಗೆ ಸೇರಿಬಿಟ್ಟರೆ ಎಂಬ ಅನುಮಾನ ಹಲವರಲ್ಲಿ ಮೂಡಿದೆ.

ಅದು 'ಆಕ್ಸಿಜನ್' ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ. ಗೋಪಿಚಂದ್‌ ಮಾತನಾಡಲು ಮೈಕ್ ಹಿಡಿದರು. 'ಪ್ರಭಾಸ್‌ ಬಗ್ಗೆ ಮಾತನಾಡಿ' ಎಂದು ಪ್ರಭಾಸ್ ಅಭಿಮಾನಿಗಳ ಗಲಾಟೆ ಮಾಡಲು ಆರಂಭಿಸಿದರು. 'ಈ ವಿಚಾರವನ್ನು ನಾನು ನಿಮ್ಮಿಂದ ಹೇಳಿಸಿಕೊಳ್ಳಬೇಕಿಲ್ಲ. ಪ್ರಭಾಸ್‌ ಮತ್ತು ನಾನು ಗೆಳೆಯರು. ಈ ಮೊದಲೇ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದೇನೆ' ಎಂದ ಗೋಪಿಚಂದ್ ಅವರ ಮಾತಿನಲ್ಲಿ ಬೇಸರ ತುಳುಕುತ್ತಿತ್ತು. ಈ ಸಂಗತಿ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ⇒v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry