ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಡಿಯನ್ ಡ್ರೋನ್‌ ಮಾರಾಟಕ್ಕೆ ನಿರ್ಧಾರ

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತಕ್ಕೆ 200 ಕೋಟಿ ಡಾಲರ್ (₹13 ಸಾವಿರ ಕೋಟಿ) ಮೊತ್ತದ 22 ಶಸ್ತ್ರರಹಿತ ಗಾರ್ಡಿಯನ್ ಡ್ರೋನ್‌ಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ಅಂತಿಮಗೊಳಿಸಲು ಟ್ರಂಪ್ ಆಡಳಿತ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೂನ್ 26ರಂದು ಭೇಟಿ ಮಾಡಿದ್ದ ಸಂದರ್ಭದಲ್ಲಿ ಗಾರ್ಡಿಯನ್ ಡ್ರೋನ್‌ ಗಳನ್ನು ಮಾರಾಟ ಮಾಡುವ ಕುರಿತು ಘೋಷಿಸಲಾಗಿತ್ತು.

ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದ ಬಳಿಕ ಘೋಷಿಸಿದ ಮೊದಲ ಪ್ರಮುಖ ರಕ್ಷಣಾ ಒಪ್ಪಂದ ಇದಾಗಿತ್ತು. ಭಾರತಕ್ಕೆ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳನ್ನು ಮಾರಾಟ ಮಾಡಲು ಆಸಕ್ತಿ ತೋರುತ್ತಿರುವ ಟ್ರಂಪ್ ಆಡಳಿತ ಈ ನಿಟ್ಟಿನಲ್ಲಿ ಬರಬ ಹುದಾದ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಉಭಯ ರಾಷ್ಟ್ರಗಳಲ್ಲಿ ಸಮಾನ ಆಸಕ್ತಿಗಳಿವೆ ಎಂದು ಅರ್ಥ ಮಾಡಿಕೊಂಡಿರುವುದರಿಂದ ರಕ್ಷಣಾ ಬಾಂಧ ವ್ಯ ಅಭಿವೃದ್ಧಿಯಾಗುತ್ತಲೇ ಇರುತ್ತದೆ ಎಂದು ಹಿರಿಯ ಆಡಳಿತಾಧಿಕಾರಿ ಹೇಳಿ ದ್ದಾರೆ.

ನೌಕಾಪಡೆಗೆ ಸೇರ್ಪಡೆ

22 ಗಾರ್ಡಿಯನ್ ಡ್ರೋನ್‌ಗಳನ್ನು ಭಾರತ ತನ್ನ ನೌಕಾಪಡೆಗೆ ಸೇರ್ಪಡೆಗೊಳಿಸಲಿದೆ ಮತ್ತು ಹಿಂದೂ ಮಹಾಸಾಗರದ ಮೇಲಿನ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತದೆ.

ಅಮೆರಿಕ–ಭಾರತದ ರಕ್ಷಣಾ ಬಾಂಧವ್ಯ ಮತ್ತಷ್ಟು ಸದೃಢಗೊಳಿಸುವಲ್ಲಿ ಈ ಡ್ರೋನ್‌ಗಳ ಮಾರಾಟ ಮಹತ್ವದ ಹೆಜ್ಜೆಯಾಗಿದೆ ಎಂದು ಜನರಲ್‌ ಅಟಾಮಿಕ್ಸ್‌ನ ಅಮೆರಿಕ ಮತ್ತು ಅಂತರರಾಷ್ಟ್ರೀಯ ವ್ಯೂಹಾತ್ಮಕ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ವಿವೇಕ್ ಲಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT