ಭಾರತ ಮೂಲದ ಬಾಲಕಿ ಶೆರಿನ್ ಸಾಕುತಂದೆ ಬಂಧನ

ಶುಕ್ರವಾರ, ಮೇ 24, 2019
30 °C

ಭಾರತ ಮೂಲದ ಬಾಲಕಿ ಶೆರಿನ್ ಸಾಕುತಂದೆ ಬಂಧನ

Published:
Updated:

ಹ್ಯೂಸ್ಟನ್ : ಎರಡು ವಾರಗಳ ಹಿಂದೆ ನಾಪತ್ತೆಯಾಗಿದ್ದ ಭಾರತ ಮೂಲದ ಬಾಲಕಿ ಶೆರಿನ್ ಮ್ಯಾಥ್ಯೂಸ್‌ (3) ಸಾಕುತಂದೆ ವೆಸ್ಲೆ ಮ್ಯಾಥ್ಯೂಸ್‌ ಅವರನ್ನು ರಿಚರ್ಡ್‌ಸನ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸೋಮವಾರವಷ್ಟೆ ಶೆರಿನ್ ಮನೆ ಸಮೀಪದಲ್ಲಿಯೇ ಮಗುವಿನ ಶವ ವೊಂದು ಸಿಕ್ಕಿದ್ದು, ಇದು ಶೆರಿನ್‌ದ್ದಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ದತ್ತುಪುತ್ರಿ ಶೆರಿನ್ ನಾಪತ್ತೆ ಯಾಗಿದ್ದ ಕುರಿತು ನೀಡಿದ್ದ ಹೇಳಿಕೆಯನ್ನು ವೆಸ್ಲೆ ಬದಲಾಯಿಸಿದ ಬಳಿಕ, ಮಗುವಿಗೆ ಗಂಭೀರ ಅಪಾಯ ಒಡ್ಡುವಂತಹ ಅಪ ರಾಧ ಎಸಗಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸ್ವಯಂಪ್ರೇರಿತರಾಗಿ ತಮ್ಮ ವಕೀಲರ ಜತೆಗೆ ರಿಚರ್ಡ್‌ಸನ್‌ ಪೊಲೀಸ್ ಠಾಣೆಗೆ ಬಂದ ವೆಸ್ಲೆ, ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಬದಲಿಸಿದರು’ ಎಂದು ಪೊಲೀಸ್ ವಕ್ತಾರ ಸರ್ಜಂಟ್ ಕೆವಿನ್ ಪರ್ಲಿಚ್ ತಿಳಿಸಿದ್ದಾರೆ. ಆದರೆ ವೆಸ್ಲೆ ಅವರು ಬದಲು ಮಾಡಿದ ಹೇಳಿಕೆಯ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಮಗುವಿಗೆ ಗಂಭೀರ ಅಪಾಯ ಒಡ್ಡುವಂತಹ ಅಪರಾಧ ಎಸಗಿದ್ದರೆ, ಇದಕ್ಕೆ 5ರಿಂದ 99 ವರ್ಷ ಅವಧಿಯ ಜೈಲುಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry