‘ಶವ ಶೆರಿನ್‌ದ್ದೇ’: ಪೊಲೀಸರ ಸ್ಪಷ್ಟನೆ

ಬುಧವಾರ, ಜೂನ್ 26, 2019
29 °C

‘ಶವ ಶೆರಿನ್‌ದ್ದೇ’: ಪೊಲೀಸರ ಸ್ಪಷ್ಟನೆ

Published:
Updated:

ಹ್ಯೂಸ್ಟನ್‌: ‘ರಸ್ತೆ ಪಕ್ಕದ ಸುರಂಗದಲ್ಲಿ ಪತ್ತೆಯಾದ ಮಗುವಿನ ಶವ ಭಾರತ ಮೂಲದ ಬಾಲಕಿ  ಶೆರಿನ್‌ ಮ್ಯಾಥ್ಯೂಸ್‌ದ್ದೇ ಎಂದು ದೃಢಪಟ್ಟಿದೆ’ ಎಂದು ರಿಚರ್ಡ್‌ಸನ್‌ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸೋಮವಾರವಷ್ಟೇ ಬಾಲಕಿಯ ಮೃತದೇಹ ಮನೆ ಸಮೀಪದಲ್ಲಿ ಪತ್ತೆಯಾಗಿತ್ತು.

ಶೆರಿನ್‌ ಸಾವಿಗೆ ಸಂಬಂಧಿಸಿದಂತೆ ಸಾಕುತಂದೆ ವೆಸ್ಲೆ ಮ್ಯಾಥ್ಯೂಸ್‌ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಬಂಧನದ ಪ್ರಮಾಣಪತ್ರದಲ್ಲಿ ಆರೋಪಿ ನೀಡಿದ ಹೇಳಿಕೆ ಪ್ರಕಾರ, ‘ಮಗಳು ಹಾಲು ಕುಡಿಯುವ ವೇಳೆ ಉಸಿರುಗಟ್ಟಿತ್ತು. ಈ ವೇಳೆ ಮಗಳು ಸಾವನ್ನಪ್ಪಿರಬೇಕು ಎಂದು ಭಾವಿಸಿ, ಶವವನ್ನು ಹೊರಕ್ಕೆ ಹಾಕಿದ್ದೆನು’ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry