ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತ ಮಹಿಳೆಯರ ಅತ್ಮಹತ್ಯೆಗೂ ಪರಿಹಾರ ನೀಡಿ’

Last Updated 24 ಅಕ್ಟೋಬರ್ 2017, 19:49 IST
ಅಕ್ಷರ ಗಾತ್ರ

ಯಾದಗಿರಿ: ‘ರೈತ ಮಹಿಳೆಯರ ಆತ್ಮಹತ್ಯೆಗೂ ಕೂಡಲೇ ಪರಿಹಾರ ನೀಡಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೃಷಿ ಚಟುವಟಿಕೆಯಲ್ಲಿ ಇಡೀ ಕುಟುಂಬ ಪಾಲ್ಗೊಳ್ಳುತ್ತದೆ. ರೈತ ಮತ್ತು ಆತನ ಪತ್ನಿ ಕೃಷಿಯ ಸ್ತಂಭಗಳು. ಆದರೆ, ರೈತನದನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಸರ್ಕಾರ ಪ್ರಕರಣ ದಾಖಲಿಸುತ್ತದೆ. ಆದರೆ, ಅದೇ ರೈತನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡರೆ ಸಹಜ ಸಾವು ಎಂದು ಪರಿಗಣಿ ನಿರ್ಲಕ್ಷಿಸುತ್ತಾ ಬಂದಿದೆ’ ಎಂದರು.

‘ಇಡೀ ಬದುಕನ್ನು ಕೃಷಿಯೊಂದಿಗೆ ಸವೆಸುವ ರೈತ ಮಹಿಳೆಯರ ಆತ್ಮಹತ್ಯೆಯೂ ರಾಜ್ಯದಲ್ಲಿ ನಡೆಯುತ್ತಿವೆ. ಅಂತಹ ರೈತ ಮಹಿಳಾ ಆತ್ಮಹತ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆದ್ಯತೆ ಮೇರೆಗೆ ರೈತ ಮಹಿಳೆಯರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

 ‘ರೈತ ಮಹಿಳೆಯರ ಆತ್ಮಹತ್ಯೆಗೂ ಕೂಡಲೇ ಪರಿಹಾರ ನೀಡಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೃಷಿ ಚಟುವಟಿಕೆಯಲ್ಲಿ ಇಡೀ ಕುಟುಂಬ ಪಾಲ್ಗೊಳ್ಳುತ್ತದೆ. ರೈತ ಮತ್ತು ಆತನ ಪತ್ನಿ ಕೃಷಿಯ ಸ್ತಂಭಗಳು. ಆದರೆ, ರೈತನದನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಸರ್ಕಾರ ಪ್ರಕರಣ ದಾಖಲಿಸುತ್ತದೆ. ಆದರೆ, ಅದೇ ರೈತನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡರೆ ಸಹಜ ಸಾವು ಎಂದು ಪರಿಗಣಿ ನಿರ್ಲಕ್ಷಿಸುತ್ತಾ ಬಂದಿದೆ’ ಎಂದರು.

‘ಇಡೀ ಬದುಕನ್ನು ಕೃಷಿಯೊಂದಿಗೆ ಸವೆಸುವ ರೈತ ಮಹಿಳೆಯರ ಆತ್ಮಹತ್ಯೆಯೂ ರಾಜ್ಯದಲ್ಲಿ ನಡೆಯುತ್ತಿವೆ. ಅಂತಹ ರೈತ ಮಹಿಳಾ ಆತ್ಮಹತ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆದ್ಯತೆ ಮೇರೆಗೆ ರೈತ ಮಹಿಳೆಯರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT