ಕೈದಿ, ಮಹಿಳಾ ಸಿಬ್ಬಂದಿ ಜತೆಗಿರುವ ಫೋಟೊ ವೈರಲ್

ಗುರುವಾರ , ಜೂನ್ 20, 2019
30 °C

ಕೈದಿ, ಮಹಿಳಾ ಸಿಬ್ಬಂದಿ ಜತೆಗಿರುವ ಫೋಟೊ ವೈರಲ್

Published:
Updated:
ಕೈದಿ, ಮಹಿಳಾ ಸಿಬ್ಬಂದಿ ಜತೆಗಿರುವ ಫೋಟೊ ವೈರಲ್

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿ ಹಾಗೂ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಜೈಲಿನ ಹೊರಗಡೆ ಜತೆಗೆ ತೆಗೆಸಿಕೊಂಡ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣದ ಅಪರಾಧಿ ಕ್ಯಾಬ್ ಚಾಲಕ ಶಿವಕುಮಾರ್ ಹಾಗೂ ಕಾರಾಗೃಹದ ಭದ್ರತೆಗೆ ನಿಯೋಜನೆಗೊಂಡಿರುವ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಫೋಟೊದಲ್ಲಿರುವವರು.

ಅನಾರೋಗ್ಯದ ನೆಪದಲ್ಲಿ ಶಿವಕುಮಾರ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗುತ್ತಿದ್ದ. ಅದೇ ಸಮಯದಲ್ಲಿ ಆ ಮಹಿಳಾ ಸಿಬ್ಬಂದಿಯನ್ನು ಅಲ್ಲಿಗೆ ಕರೆಸಿಕೊಳ್ಳುತ್ತಿದ್ದ. ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರ ಕಣ್ತಪ್ಪಿಸಿ ನಗರದೆಲ್ಲೆಡೆ ಅವರಿಬ್ಬರೂ ಸುತ್ತಾಡುತ್ತಿದ್ದರು. ಸುತ್ತಾಟದ ವೇಳೆ ಆ ಮಹಿಳೆ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಹೋದ್ಯೋಗಿಯೊಬ್ಬರು ಮಹಿಳಾ ಸಿಬ್ಬಂದಿಯ ಮೊಬೈಲ್ ಪರಿಶೀಲಿಸುವಾಗ ಆ ಫೋಟೊ ಕಾಣಿಸಿದೆ. ಅದನ್ನು ತನ್ನ ಮೊಬೈಲ್‌ಗೆ ಕಳುಹಿಸಿಕೊಂಡ ಅವರು ಅದನ್ನು ಜೈಲಿನ ಇತರ ಸಿಬ್ಬಂದಿಗೂ ಕಳುಹಿಸಿದ್ದರು. ಅದೇ ಫೋಟೊ ವೈರಲ್ ಆಗಿದೆ ಎನ್ನಲಾಗಿದೆ.

ಫೋಟೊ ಬಗ್ಗೆ ಗೊತ್ತಿಲ್ಲ:

‘ಈ ಫೋಟೊ ಬಗ್ಗೆ ಮಾಹಿತಿ ಇಲ್ಲ. ಅವರಿಬ್ಬರೂ ಹೊರಗಡೆ ಸುತ್ತಾಡಿರುವುದು ನಿಜವಾಗಿದ್ದರೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಸೋಮಶೇಖರ್ ತಿಳಿಸಿದ್ದಾರೆ.

‘ಮುಖ್ಯ ಅಧೀಕ್ಷಕನಾಗಿ ಮೂರು ತಿಂಗಳ ಹಿಂದಷ್ಟೇ ನೇಮಕಗೊಂಡಿದ್ದೇನೆ. ಅಧಿಕಾರ ಸ್ವೀಕರಿಸಿದ ದಿನದಿಂದಲೂ ಇಲ್ಲಿಯವರೆಗೂ ಶಿವಕುಮಾರ್‌ನನ್ನು ಕಾರಾಗೃಹದಿಂದ ಹೊರಗೆ ಕಳುಹಿಸಿಲ್ಲ. ಈ ಚಿತ್ರ ಮೂರು ತಿಂಗಳ ಹಿಂದಿನದ್ದಿರಬಹುದು’ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry