ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತ್ಯವನ್ನು ನೇರವಾಗಿ ಹೇಳುವ ಪರಿಸ್ಥಿತಿ ಇಂದಿಲ್ಲ’

Last Updated 25 ಅಕ್ಟೋಬರ್ 2017, 5:21 IST
ಅಕ್ಷರ ಗಾತ್ರ

ನಿಪ್ಪಾಣಿ: ‘ಸತ್ಯವನ್ನು ನೇರವಾಗಿ ಹೇಳಲಾಗದ ಪರಿಸ್ಥಿತಿ ಇಂದು ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅಭಿಪ್ರಾಯ ಪಟ್ಟರು.

ಇಲ್ಲಿನ ಜಿ.ಐ. ಬಾಗೇವಾಡಿ ಕಾಲೇಜಿನಲ್ಲಿ ಕ.ಸಾ.ಪದ ಚಿಕ್ಕೋಡಿ ಹಾಗೂ ನಿಪ್ಪಾಣಿ ಘಟಕ, ಗಡಿನಾಡು ಕನ್ನಡ ಬಳಗ ನಿಪ್ಪಾಣಿ ಹಾಗೂ ಗೆಳೆಯರ ಬಳಗ ಯಕ್ಸಂಬಾ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಗುರುಪಾದ ಮರಿಗುದ್ದಿಯವರ ಸಾಹಿತ್ಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಡಾ. ಗುರುಪಾದ ಮರಿಗುದ್ದಿ ಅವರು ಮಾನವೀಯ ತುಡಿತವುಳ್ಳ ಲೇಖಕರಾಗಿದ್ದರು. ತಾವು ಬೆಳೆದು ಇತರರನ್ನು ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎಂದರು.

ಡಾ. ಗುರುಪಾದ ಮರಿಗುದ್ದಿ ಅವರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆದವು. ಸಮೀಪದ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಕ್ಕೋಡಿಯ ಕಸಾಪ ಘಟಕದ ಅಧ್ಯಕ್ಷ ಶ್ರೀಪಾದ ಕುಂಬಾರ, ಯಕ್ಸಂಬಿ ಗೆಳೆಯರ ಬಳಗದ ಅಧ್ಯಕ್ಷ ನಿಖಿಲ ಕಮತೆ, ಗಡಿನಾಡ ಕನ್ನಡ ಬಳಗದ ಅಧ್ಯಕ್ಷ ಎಂ.ಆರ್. ಕೊಣ್ಣುರಿ, ಜಿ.ಐ. ಬಾಗೇವಾಡಿ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ. ಕೊಥಳೆ, ಪ್ರೊ. ಚಂದ್ರಕಾಂತ ಪೋಕಳೆ, ಡಾ. ರಾಜಶೇಖರ ಇಚ್ಚಂಗಿ, ಡಾ. ಬಿ.ಆರ್. ಹಂದೂರ, ಪ್ರೊ. ಎಲ್.ವಿ. ಪಾಟೀಲ. ಹಮೀದಾ ಬೇಗಂ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT