ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೀಕೆಗಳಿಗೆ ಜನರಿಂದಲೇ ಉತ್ತರ’

Last Updated 25 ಅಕ್ಟೋಬರ್ 2017, 5:25 IST
ಅಕ್ಷರ ಗಾತ್ರ

ಬೆನಕಟ್ಟಿ (ತಾ.ಸವದತ್ತಿ): ಜನತೆಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವ ಮೂಲಕ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಶಾಸಕ ಆನಂದ ಮಾಮನಿ ಹೇಳಿದರು. ಅವರು ಸೋಮವಾರ ಸಂಜೆ ಮದ್ಲೂರ ಶ್ರೀಕೃಷ್ಣ ದೇವಸ್ಥಾನದ ಹತ್ತಿರ ಸಮುದಾಯ ಭವನ, ಪಾಂಜಾ ಮಸೀದಿ ಹತ್ತಿರ ಸಮುದಾಯ ಭವನದ ಅಡಿಗಲ್ಲು ಪೂಜೆ, ಚಂದ್ರಮಾ ಗ್ರಾಮೀಣ ಅಭಿವೃದ್ಧಿ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ಕಾಂಗ್ರೆಸ್‌ನವರು ಮಾಡಲಾರದಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ. ಆದರೂ ಟೀಕೆ ಮಾಡುತ್ತಾರೆ, ಅವುಗಳಿಗೆ ಜನತೆಯೇ ಚುನಾವಣೆಯಲ್ಲಿ ಉತ್ತರಿ ಸುತ್ತಾರೆ, ಜನರ ಜತೆಗೆ ಇದ್ದು ಕಾರ್ಯ ಮಾಡೋಣ’ ಎಂದು ಹೇಳಿದರು.

’ಬಿಡಿಸಿಸಿ ಯಿಂದ 79 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ₹ 79 ಕೋಟಿ ಸಾಲ ನೀಡಲಾಗುತ್ತಿತ್ತು. ತಾವು 11 ಸಂಘಗಳನ್ನು ಪ್ರಾರಂಭ ಮಾಡಿ ₹ 145 ಕೋಟಿ ಸಾಲವನ್ನು ರೈತರಿಗೆ ನೀಡಲಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಮನ್ನಿಕಟ್ಟಿ ಮಾತನಾಡಿದರು. ಶಿಶುವಿನಾಳದ ಹುಸೇನ್‌ಸಾಬ ಶರೀಫ್‌ನವರ ಹಾಗೂ ತುಕಾರಾಮ ಮಹಾರಾಜರು ಸಾನಿಧ್ಯ ವಹಿಸಿದ್ದರು. ಬಸಯ್ಯ ಹಿರೇಮಠ, ಸುಭಾನಿ ದೊಡಮನಿ ನೇತೃತ್ವ ವಹಿಸಿಕೊಂಡಿದ್ದರು. ಎಂ. ಬಿ. ಕಲಕುಟ್ರಿ ಅಧ್ಯಕ್ಷತೆ  ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಜುಂಜನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT