ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಿಗೇಶ್ವರ ಮಠಕ್ಕೆ ರಥ, ದ್ವಾರಬಾಗಿಲೂ ನೀಡಿದ್ದ ಟಿಪ್ಪು

Last Updated 25 ಅಕ್ಟೋಬರ್ 2017, 6:45 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಸದಾಶಿವಪೇಟೆ ವಿರಕ್ತಮಠ (ಗದ್ದಿಗೇಶ್ವರ ಮಠದ)ಕ್ಕೆ ಟಿಪ್ಪು ಸುಲ್ತಾನ್ ಅಡ್ಡಪಲ್ಲಕ್ಕಿಯ ಜೊತೆಗೆ ನಿರ್ಮಿಸಿಕೊಟ್ಟ ನಗಾರಿಖಾನೆ (ದ್ವಾರಬಾಗಿಲು) ಹಾಗೂ ರಥವು ಇಂದಿಗೂ ‘ಸಾಮರಸ್ಯ’ಕ್ಕೆ ಸಾಕ್ಷಿಯಾಗಿದೆ. ಟಿಪ್ಪು ಸವಣೂರಿಗೆ ಬಂದಾಗಲೆಲ್ಲ ಇಲ್ಲಿನ ಮಠದ ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವುದು. ಅಭಿವೃದ್ಧಿ ಕಾರ್ಯದಲ್ಲಿ ನೆರವಾಗಿದ್ದಾರೆ.

ಇಲ್ಲಿನ ಶ್ರೀಗಳು ನೀಡದ ಔಷಧಿಯಿಂದ ನೋವು ಗುಣಮುಖವಾದ ಬಳಿಕ, ಟಿಪ್ಪು ಮಠಕ್ಕೆ ಅಡ್ಡಪಲ್ಲಕ್ಕಿ ನೀಡಿದ್ದರು. ಅನಂತರ ಮಠದ ನಗಾರಿಖಾನೆ(ದ್ವಾರಬಾಗಿಲು) ನಿರ್ಮಿಸುತ್ತಾರೆ. ಅಲ್ಲದೆ 3 ಎಕರೆ ಭೂಮಿಯನ್ನೂ ಮಠಕ್ಕೆ ದಾನವಾಗಿ ನೀಡುತ್ತಾರೆ. ಅನಂತರ ಭವ್ಯ ರಥವನ್ನು ನಿರ್ಮಿಸಿಕೊಡುತ್ತಾರೆ.

ಎರಡು ಶತಮಾನಗಳ ಹಿಂದಿನ ರಥವು ಈಗ ಶಿಥಿಲಾವಸ್ಥೆಯಲ್ಲಿದ್ದು, ಹೊಸ ರಥದ ಹಿಂದೆ ಇಡಲಾಗಿದೆ. ಸುಮಾರು 25 ಅಡಿ ಎತ್ತರದ ರಥಕ್ಕೆ 6 ಅಡಿ ಎತ್ತರದ ಗಾಲಿಗಳಿವೆ.

ಈ ರಥವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಕೇಳಿದ್ದರು. ಆದರೆ, ಟಿಪ್ಪು ನೀಡಿದ ಕೊಡುಗೆ ಎಂದು ನಾವು ಇಂದಿಗೂ ಉಳಿಸಿಕೊಂಡಿದ್ದೇವೆ’ ಎಂದು ಮಠದ ಗದ್ದಿಗೇಶ್ವರ ಸ್ವಾಮೀಜಿ ಹೆಮ್ಮೆಯಿಂದ ನುಡಿದರು.

ಕನಕರು: ವಿರಕ್ತಮಠಕ್ಕೆ ಸುಮಾರು ಐದು ನೂರು ವರ್ಷಗಳ ಇತಿಹಾಸವಿದ್ದು, ಸಂತ ಕನಕರು ಸಂಸಾರ ತ್ಯಜಿಸಿ ಹೊರಡುವ ಸಂದರ್ಭದಲ್ಲಿ ಮಠದ ಅಂದಿನ ಗದ್ದಿಗೇಶ್ವರ ಸ್ವಾಮೀಜಿ ಬೋಧನೆ ಮಾಡಿದ್ದರು. ಕನಕದಾಸರು ಶ್ರೀರಂಗನಾಥರ ಆರಾಧನೆ ಮಾಡಿದ ಮೂಲ ವಿಗ್ರಹಗಳು ಇಲ್ಲಿ ಸಾಕ್ಷಿಯಾಗಿವೆ’ ಎಂದು ಗದಿಗೇಶ್ವರ ಸ್ವಾಮೀಜಿ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT