ಎಲ್ಲೆಂದರಲ್ಲಿ ರಾಷ್ಟ್ರಭಕ್ತಿ ಪರೀಕ್ಷೆ ಬೇಡ: ಕಮಲಹಾಸನ್

ಸೋಮವಾರ, ಜೂನ್ 24, 2019
30 °C

ಎಲ್ಲೆಂದರಲ್ಲಿ ರಾಷ್ಟ್ರಭಕ್ತಿ ಪರೀಕ್ಷೆ ಬೇಡ: ಕಮಲಹಾಸನ್

Published:
Updated:
ಎಲ್ಲೆಂದರಲ್ಲಿ ರಾಷ್ಟ್ರಭಕ್ತಿ ಪರೀಕ್ಷೆ ಬೇಡ: ಕಮಲಹಾಸನ್

ನವದೆಹಲಿ: ಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸುವುದಕ್ಕೆ ನಟ ಕಮಲಹಾಸನ್ ಅಸಮಾಧಾನ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಸಿಂಗಪುರದ ಉದಾಹರಣೆ ನೀಡಿದ್ದಾರೆ. ‘ಸಿಂಗಪುರದಲ್ಲಿ ಪ್ರತಿ ಮಧ್ಯರಾತ್ರಿ ರಾಷ್ಟ್ರಗೀತೆ ಪ್ರಸಾರ ಮಾಡಲಾಗುತ್ತದೆ. ಅದೇ ರೀತಿ ದೂರದರ್ಶನ ವಾಹಿನಿಯಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡಬಹುದು. ವಿವಿಧ ಸ್ಥಳಗಳಲ್ಲಿ ದೇಶಭಕ್ತಿಯನ್ನು ಪರೀಕ್ಷಿಸಬೇಡಿ ಅಥವಾ ಹೇರಬೇಡಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಗೀತೆ ಹಾಡುವಂತೆ ನಾಗರಿಕರ ಮೇಲೆ ಒತ್ತಡ ಹೇರುವುದು ಬೇಡ ಎಂದೂ ಕಮಲಹಾಸನ್ ಹೇಳಿದ್ದಾರೆ.

ಸಿನಿಮಾ ಪ್ರದರ್ಶನಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವ, ಕಳೆದ ವರ್ಷದ ಆದೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಮತ್ತೆ ವಿಚಾರಣೆ ನಡೆಸಿತ್ತು. ಅಲ್ಲದೆ, ‘ನಾವ್ಯಾಕೆ ದೇಶಭಕ್ತಿಯನ್ನು ನಮ್ಮ ತೋಳುಗಳಲ್ಲಿ ಧರಿಸಬೇಕು? ಜನರು ಮನರಂಜನೆಗಾಗಿ ಸಿನಿಮಾಕ್ಕೆ ತೆರಳುತ್ತಾರೆ. ಶಾರ್ಟ್ಸ್ ಮತ್ತು ಟಿ-ಶರ್ಟ್‌ಗಳನ್ನು ಧರಿಸಿ ಸಿನಿಮಾಕ್ಕೆ ಬರಬಾರದು, ಯಾಕೆಂದರೆ ಅಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತದೆ ಎಂದು ನಾಳೆ ಇನ್ಯಾರಾದರೂ ಹೇಳುವ ಸಾಧ್ಯತೆ ಇದೆ. ನಾವು ಗೆರೆ ಎಳೆದಂತೆ ಅದನ್ನು ದಾಟುವ ಸಾಧ್ಯತೆ ಹೆಚ್ಚು. ಯಾವಾಗ ಈ ನೈತಿಕ ಪೊಲೀಸಿಂಗ್ ಕೊನೆಗೊಳ್ಳಲಿದೆ’ ಎಂದು ನ್ಯಾಯಪೀಠ ಪ್ರಶ್ನಿಸಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry