2018ರ ಫಿಫಾ ವರ್ಲ್ಡ್‌ ಕಪ್‌ ಮೇಲೆ ಕಣ್ಣಿಟ್ಟ ಐಸಿಸ್

ಗುರುವಾರ , ಜೂನ್ 27, 2019
23 °C
ಪೋಸ್ಟರ್‌ನಲ್ಲಿ ಮೆಸ್ಸಿ ಚಿತ್ರ ಬಳಕೆ

2018ರ ಫಿಫಾ ವರ್ಲ್ಡ್‌ ಕಪ್‌ ಮೇಲೆ ಕಣ್ಣಿಟ್ಟ ಐಸಿಸ್

Published:
Updated:
2018ರ ಫಿಫಾ ವರ್ಲ್ಡ್‌ ಕಪ್‌ ಮೇಲೆ ಕಣ್ಣಿಟ್ಟ ಐಸಿಸ್

ನವದೆಹಲಿ: ಐಸಿಸ್ ಉಗ್ರ ಸಂಘಟನೆಯು ಮುಂದಿನ ವರ್ಷ ರಷ್ಯಾದಲ್ಲಿ ನಡೆಯುವ 2018ರ ಫಿಫಾ ವರ್ಲ್ಡ್‌ ಕಪ್‌ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಭಯದ ವಾತಾವರಣ ಸೃಷ್ಟಿ ಮಾಡಿದೆ.

ಅರ್ಜೆಂಟೀ­ನಾದ ಫುಟ್‌ಬಾಲ್‌ ಆಟಗಾರ ಲಯೊ­ನೆಲ್‌ ಮೆಸ್ಸಿ ಅವರನ್ನು ಗುರಿಯಾಗಿಸಿಕೊಂಡಿರುವ ಪೋಸ್ಟರ್‌ ಅನ್ನು ಐಸಿಸ್ ಉಗ್ರ ಸಂಘಟನೆ ಬಿಡುಗಡೆ ಮಾಡಿದೆ.

ಈ ಪೋಸ್ಟರ್‌ ಅನ್ನು ವಾಫಾ ಮೀಡಿಯಾ ಫೌಂಡೇಶನ್ ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಬೆದರಿಕೆ ಒಡ್ಡಿದ್ದು, ಇದು ಸೈಟ್‌(SITE) ಭಯೋತ್ಪಾದಕ ವಿರೋಧಿ ಸಂಘಟನೆಗೆ ದೊರೆತಿದೆ. ಈ ಪೋಸ್ಟರ್‌ ನಲ್ಲಿ ಮೆಸ್ಸಿಯವರನ್ನು ಜೈಲು ಕಂಬಿಗಳ ಹಿಂದೆ ರಕ್ತ ಕಣ್ಣೀರು ಸುರಿಸುತ್ತಿರುವಂತೆ ಚಿತ್ರಿಸಲಾಗಿದೆ.

ಇದರ ಜತೆಗೆ ‘ನೀನು ರಾಜ್ಯಕ್ಕಾಗಿ ಹೋರಾಡಿದ್ದಲ್ಲಿ ನಿನ್ನ ಶಬ್ದಕೋಶದಲ್ಲಿ ಸೋಲು ಎಂಬುದಿರುವುದಿಲ್ಲ ಎಂಬ ಸಂದೇಶವಿದ್ದು, ಇದರಲ್ಲಿ Just Do IT, Just Terrorism ಎಂಬ ಅಡಿಬರಹವಿದೆ. ಅಲ್ಲದೇ ‘ಮುಜಾಹಿದ್ದೀನ್‌ನ ಆಕ್ರೋಶ ನಿಮ್ಮನ್ನು ಸುಡುತ್ತದೆ. ನೀವು ಕಾಯಬೇಕು’ ಎಂದು ಬರೆದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry