ಬ್ರಾಹ್ಮಣೇತರ ಅರ್ಚಕರ ನೇಮಕಕ್ಕೆ ಬಲಪಂಥೀಯ ಸಂಘಟನೆ ಹಿಂದೂ ಐಕ್ಯ ವೇದಿ ಬೆಂಬಲ

ಬುಧವಾರ, ಮೇ 22, 2019
24 °C

ಬ್ರಾಹ್ಮಣೇತರ ಅರ್ಚಕರ ನೇಮಕಕ್ಕೆ ಬಲಪಂಥೀಯ ಸಂಘಟನೆ ಹಿಂದೂ ಐಕ್ಯ ವೇದಿ ಬೆಂಬಲ

Published:
Updated:
ಬ್ರಾಹ್ಮಣೇತರ ಅರ್ಚಕರ ನೇಮಕಕ್ಕೆ ಬಲಪಂಥೀಯ ಸಂಘಟನೆ ಹಿಂದೂ ಐಕ್ಯ ವೇದಿ ಬೆಂಬಲ

ತಿರುವನಂತಪುರ: ಕೇರಳದ ದೇವಾಲಯಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಿದ ಬೆನ್ನಲ್ಲೇ, ಜಾತಿಯನ್ನೂ ಮೀರಿ ಅರ್ಹ ಅರ್ಚಕರ ನೇಮಕ ಮಾಡುವುದಕ್ಕೆ ತನ್ನ ಬೆಂಬಲವಿದೆ ಎಂದು ಬಲಪಂಥೀಯ ಸಂಘಟನೆ ಹಿಂದೂ ಐಕ್ಯ ವೇದಿ ಹೇಳಿದೆ.

‘ಸಂಪ್ರದಾಯದಲ್ಲಿ ಹೇಳಿರುವಂತೆ ಪೂಜೆ ಮತ್ತು ತಂತ್ರಗಳ ಬಗ್ಗೆ ಜ್ಞಾನ ಇರುವ ಯಾರಾದರೂ ಗರ್ಭಗುಡಿಯೊಳಗೆ ಪ್ರವೇಶಿಸಲು ಮತ್ತು ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಅರ್ಹರಾಗಿರುತ್ತಾರೆ. ಅಂಥ ವ್ಯಕ್ತಿಯು ಹುಟ್ಟಿನಿಂದ ಬ್ರಾಹ್ಮಣನಲ್ಲದಿದ್ದರೂ ತನ್ನ ಕೃತಿಗಳಿಂದ ಬ್ರಾಹ್ಮಣನಾಗುತ್ತಾನೆ ಎಂಬುದು ನಮ್ಮ ನಂಬಿಕೆ’ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಇ.ಎಸ್. ಬಿಜು ಬುಧವಾರ ಹೇಳಿದ್ದಾರೆ.

‘ಹಿಂದೂ ಧರ್ಮದ ಆಚರಣೆಯಲ್ಲಿ ನಿಜವಾದ ನಂಬಿಕೆ ಇರುವ ಮತ್ತು ಆಯಾ ದೇವಸ್ಥಾನಗಳ ಸಂಪ್ರದಾಯಗಳನ್ನು ಪಾಲಿಸುವ ಯಾರೇ ಆದರೂ ಪ್ರಾರ್ಥನೆ ಸಲ್ಲಿಸಲು ದೇವಾಲಯವನ್ನು ಪ್ರವೇಶಿಸಬಹುದು. ಅದು ಗುರುವಾಯೂರು ದೇವಾಲಯ ಅಥವಾ ಶಬರಿಮಲೆಯಾದರೂ ಆಗಿರಲಿ’ ಎಂದು ಅವರು ಹೇಳಿದ್ದಾರೆ.

ಶಬರಿಮಲೆ ದೇವಾಲಯ ಅರ್ಚಕ ಸ್ಥಾನಕ್ಕೆ ಬ್ರಾಹ್ಮಣರು ಮಾತ್ರ ಅರ್ಜಿ ಸಲ್ಲಿಸಬಹುದು ಎಂಬ ಕಾರಣ ನೀಡಿ ತನಗೆ ಅರ್ಚಕ ಹುದ್ದೆಯನ್ನು ತಪ್ಪಿಸಲಾಗಿದೆ ಎಂದು ಬ್ರಾಹ್ಮಣೇತರ ವ್ಯಕ್ತಿಯೊಬ್ಬರು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ವಿರುದ್ಧ ಆರೋಪಿಸಿದ ಮರುದಿನವೇ ಈ ಹೇಳಿಕೆ ಹೊರಬಿದ್ದಿದೆ.

ಟಿಡಿಬಿ ಅಧೀನದ ದೇವಾಲಯಗಳಿಗೆ ಆರು ದಲಿತರೂ ಒಳಗೊಂಡು ಒಟ್ಟೂ 36 ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಲಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry