ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರಿ ಬ್ರಾಹ್ಮಣರಲ್ಲ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿಯವರು ಬ್ರಾಹ್ಮಣರನ್ನು ಹೊಗಳುವ ಭರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನೂ ಬ್ರಾಹ್ಮಣರ ಸಾಲಿಗೆ ಸೇರಿಸಿದ್ದಾರೆ (ವಾ.ವಾ., ಅ. 18). ವಾಸ್ತವದಲ್ಲಿ ಶಾಸ್ತ್ರಿ ಬಾಹ್ಮಣರಲ್ಲ. ಅವರ ಮೂಲ ಉಪನಾಮ ಶ್ರೀವಾಸ್ತವ, ಅವರ ತಾಯಿಯ ಉಪನಾಮ ವರ್ಮಾ. ಶ್ರೀವಾಸ್ತವ ಮತ್ತು ವರ್ಮಾ ಉಪನಾಮಗಳು ಬರುವುದು ಕಾಯಸ್ಥ (ಕ್ಷತ್ರಿಯ) ಜಾತಿಯವರಲ್ಲಿ. ಲಾಲ್ ಬಹದ್ದೂರರು ಹಿಂದೂ ಜಾತಿ ವ್ಯವಸ್ಥೆಯನ್ನು ದ್ವೇಷಿಸುತ್ತಿದ್ದುದರಿಂದ ತಮ್ಮ ಜಾತಿ ಸೂಚಕ ಶ್ರೀವಾಸ್ತವ ಮತ್ತು ವರ್ಮಾ ಎಂಬ ಎರಡೂ ಉಪನಾಮಗಳನ್ನು ತ್ಯಜಿಸಿದ್ದರು.

ಲಾಲ್ ಬಹದ್ದೂರರಿಗೆ ‘ಶಾಸ್ತ್ರಿ’ ಎಂಬ ಬಿರುದು ಕೊಟ್ಟಿದ್ದು ಕಾಶಿ ವಿದ್ಯಾಪೀಠ. ನಂತರ ಅದೇ ಅವರ ಉಪನಾಮವಾಯಿತು. ದಕ್ಷಿಣ ಭಾರತದಲ್ಲಿ ಕಾಯಸ್ಥ ಎಂಬ ಜಾತಿ ಇಲ್ಲದ್ದರಿಂದ ದಕ್ಷಿಣ ಭಾರತೀಯರಿಗೆ ಈ ಜಾತಿಯ ಬಗ್ಗೆ ಮಾಹಿತಿ ಕಡಿಮೆ. ಸ್ವಾಮಿ ವಿವೇಕಾನಂದರೂ ಇದೇ ಕಾಯಸ್ಥ ಜಾತಿಯವರು (ಬೆಂಗಾಲಿ ಕ್ಷತ್ರಿಯ).

ಉತ್ತರ ಪ್ರದೇಶ, ಬಿಹಾರ, ಬಂಗಾಳ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಸ್ಥರಿದ್ದಾರೆ.

ಸುಭಾಷ್ ಚಂದ್ರ ಬೋಸ್, ಜಗದೀಶ್ ಚಂದ್ರ ಬೋಸ್, ಬಾಬು ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಕಾದಂಬರಿಕಾರ ಪ್ರೇಮ್ ಚಂದ್, ಸಾಹಿತಿ ಭಗವತಿಚರಣ್ ವರ್ಮಾ, ಮಹಾದೇವಿ ವರ್ಮಾ, ಜ್ಯೋತಿ ಬಸು, ಸ್ವಾತಂತ್ರ್ಯ ಹೋರಾಟಗಾರ ಬಿಪಿನ್ ಚಂದ್ರ ಪಾಲ್, ಆಚಾರ್ಯ ರಜನೀಶ್, ಮಹರ್ಷಿ ಮಹೇಶ್ ಯೋಗಿ, ಯಶವಂತ ಸಿನ್ಹಾ, ಅಮಿತಾಭ್ ಬಚ್ಚನ್, ಶತ್ರುಘ್ನ ಸಿನ್ಹಾ, ಸೋನು ನಿಗಂ... ಇವರೆಲ್ಲ ಕಾಯಸ್ಥ ಸಮುದಾಯಕ್ಕೆ ಸೇರಿದವರು (ಹೆಚ್ಚಿನ ವಿವರಕ್ಕಾಗಿ ಗೂಗಲ್‌ನಲ್ಲಿ ‘ಕಾಯಸ್ಥ-ವಿಕಿಪೀಡಿಯ’ ನೋಡಬಹುದು).

–ಅನಿಲ್ ಕುಮಾರ್ ಪೂಜಾರಿ, ಅಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT