ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕಾಯಂಗೊಳಿಸಿ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

1988-89ರಲ್ಲಿ ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯಿತಿಗೊಂದರಂತೆ ಗ್ರಂಥಾಲಯಗಳನ್ನು ಆರಂಭಿಸಿತ್ತು. ಪ್ರಸಕ್ತ ಈ ಗ್ರಂಥಾಲಯಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ಗ್ರಂಥಾಲಯ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದು, 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಅವರಿಗೆ ತಿಂಗಳಿಗೆ ₹ 7000 ಗೌರವಧನವನ್ನು ನೀಡಲಾಗುತ್ತಿದೆ. ಇದು ಅವರ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಾಗುತ್ತಿಲ್ಲ.

ಹಿಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮೇಲ್ವಿಚಾರಕರ ಕೆಲಸವನ್ನು ಕಾಯಂಗೊಳಿಸುವ ಭರವಸೆ ನೀಡಿದ್ದರು. ಆದರೆ ಭರವಸೆ ಜಾರಿಯಾಗಿಲ್ಲ. ಈಗಿನ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಗ್ರಂಥಾಲಯ ಸಚಿವ ತನ್ವೀರ್ ಸೇಠ್‌ ಅವರು ಈಚೆಗೆ ದಾವಣಗೆರೆಗೆ ಬಂದಿದ್ದಾಗ
ಅವರಿಗೂ ಈ ಬಗ್ಗೆ ಒಂದು ಮನವಿ ಸಲ್ಲಿಸಲಾಗಿತ್ತು. ಅವರೂ ಹುದ್ದೆ ಕಾಯಂಗೊಳಿಸುವುದಾಗಿ ಮೌಖಿಕ ಭರವಸೆ ಕೊಟ್ಟಿದ್ದರು. ಆದರೆ ಈವರೆಗೆ ಆ ನಿಟ್ಟಿನಲ್ಲಿ ಏನೂ ಆಗಿಲ್ಲ. ನಮ್ಮ ಹಕ್ಕಿಗಾಗಿ ಅನೇಕ ಬಾರಿ ಬೆಂಗಳೂರಿನಲ್ಲಿ ಪ್ರತಿಭಟನೆಯನ್ನೂ ಮಾಡಿದ್ದೇವೆ.

ಜನಸಾಮಾನ್ಯರಿಗೆ ಹತ್ತಾರು ‘ಭಾಗ್ಯ’ಗಳನ್ನು ಕರುಣಿಸಿರುವ ಸರ್ಕಾರ, 29 ವರ್ಷಗಳಿಂದ ಗ್ರಂಥಾಲಯದಲ್ಲಿ ದುಡಿಯುತ್ತಿರುವ ಮೇಲ್ವಿಚಾರಕರಿಗೆ ‘ಹುದ್ದೆ ಕಾಯಂ ಭಾಗ್ಯ’ ಕೊಟ್ಟು, ಕನಿಷ್ಠ ₹ 13,000 ವೇತನವಾದರೂ ನೀಡಬೇಕು.

–ದಾದಾಪೀರ್ ಆರ್.ಎನ್., ನವಿಲೇಹಾಳ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT