ಗುರುವಾರ , ಸೆಪ್ಟೆಂಬರ್ 19, 2019
26 °C

ಶೆರಿನ್ ಸಾಕುತಂದೆಗೆ ಜೀವಾವಧಿ ಶಿಕ್ಷೆ ಸಾಧ್ಯತೆ

Published:
Updated:
ಶೆರಿನ್ ಸಾಕುತಂದೆಗೆ ಜೀವಾವಧಿ ಶಿಕ್ಷೆ ಸಾಧ್ಯತೆ

ಹ್ಯೂಸ್ಟನ್: ಭಾರತ ಮೂಲದ ಬಾಲಕಿ ಶೆರಿನ್ ಮ್ಯಾಥ್ಯೂಸ್‌ ಸಾವನ್ನಪ್ಪಿರುವ ಪ್ರಕರಣದಲ್ಲಿ ಆಕೆಯ ಸಾಕುತಂದೆ ವೆಸ್ಲೆ ಮ್ಯಾಥ್ಯೂಸ್‌ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಮತ್ತಷ್ಟು ಜನರನ್ನು ಬಂಧಿಸಬಹುದು ಎಂದು ರಿಚರ್ಡ್‌ಸನ್ ಪೊಲೀಸರು ತಿಳಿಸಿದ್ದಾರೆ.

ದತ್ತುಪುತ್ರಿ ಶೆರಿನ್ ನಾಪತ್ತೆ ಕುರಿತು ನೀಡಿದ್ದ ಹೇಳಿಕೆಯನ್ನು ವೆಸ್ಲೆ ಮಂಗಳವಾರ ಬದಲಿಸಿದ್ದರು. ಇದರಿಂದಾಗಿ ಅವರನ್ನು ಬಂಧಿಸಲಾಗಿತ್ತು.

‘ಆ ಸಂದರ್ಭದಲ್ಲಿ ದೊರಕುವ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಆಧರಿಸಿ ಆರೋಪ ಹೊರಿಸಲಾಗುತ್ತದೆ. ಪ್ರಸ್ತುತ ವೆಸ್ಲೆ ನೀಡಿರುವ ಹೇಳಿಕೆ, ಅವರು ಮಗುವಿಗೆ ಗಂಭೀರ ಅಪಾಯವಾಗುವಂತಹ ಕೃತ್ಯ ಎಸಗಿರಬಹುದು ಎನ್ನುವುದಕ್ಕೆ ಪೂರಕವಾಗಿದೆ’ ಎಂದು ರಿಚರ್ಡ್‌ಸನ್ ಪೊಲೀಸರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.

Post Comments (+)