ಸೋಮವಾರ, ಸೆಪ್ಟೆಂಬರ್ 16, 2019
22 °C

ಕುಸಿದು ಬಿದ್ದ ಶಾಸಕ

Published:
Updated:

ಬೆಂಗಳೂರು: ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಜೊತೆ ಫೋಟೊ ಸೆಷನ್‍ನಲ್ಲಿ ಭಾಗವಹಿಸಬೇಕಿದ್ದ ಕೊಳ್ಳೇಗಾಲ ಕಾಂಗ್ರೆಸ್ ಶಾಸಕ ಎಸ್‌. ಜಯಣ್ಣ ಕುಸಿದು ಬಿದ್ದು ಭುಜಕ್ಕೆ ಪೆಟ್ಟು ಮಾಡಿಕೊಂಡ ಘಟನೆ ನಡೆಯಿತು.

ಉಭಯ ಸದನಗಳ ಶಾಸಕರು ಫೋಟೊ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಜಯಣ್ಣ ಜಾರಿ ಬಿದ್ದಿದ್ದಾರೆ. ನೆಲಹಾಸು ಕಲ್ಲಿನದ್ದಾಗಿದ್ದರಿಂದ ಬಿದ್ದ ರಭಸಕ್ಕೆ ಮೆಟ್ಟಿಲು ತಾಗಿ ಅವರ ಭುಜಕ್ಕೆ ಪೆಟ್ಟಾಗಿದೆ. ತಕ್ಷಣ ಅವರನ್ನು ಅಲ್ಲಿಯೇ ಇದ್ದ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್‍ ಶಾಸಕರು ಫೋಟೊ ತೆಗೆಸಿಕೊಳ್ಳುವ ಸಂಭ್ರಮದಲ್ಲಿದ್ದರು.

ಹೀಗಾಗಿ, ಫೋಟೊ ಸೆಷನ್ ಬಹಿಷ್ಕರಿಸಿ ಹೊರ ಹೋಗುತ್ತಿದ್ದ ಜೆಡಿಎಸ್‍ನ ಕೆಲವು ಶಾಸಕರು ಜಯಣ್ಣ ಅವರ ನೆರವಿಗೆ ಬಂದರು.

Post Comments (+)