ಗುರುವಾರ , ಸೆಪ್ಟೆಂಬರ್ 19, 2019
26 °C

ನೋಂದಣಿ ರದ್ದು ಸೌಲಭ್ಯಕ್ಕೆ ಚಾಲನೆ

Published:
Updated:

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ವಲಸೆ ಬಂದಿರುವ ವಹಿವಾಟುದಾರರಲ್ಲಿ ತಮ್ಮ ನೋಂದಣಿ ರದ್ದುಪಡಿಸಲು ಇಚ್ಛಿಸುವವರಿಗೆ ‘ಜಿಎಸ್‌ಟಿಎನ್‌’ ಜಾಲತಾಣದಲ್ಲಿ ಈಗ ಸೂಕ್ತ ಸೌಲಭ್ಯ ಕಲ್ಪಿಸಿಕೊಡಲಾಗಿದೆ.

‘ವಲಸೆ ತೆರಿಗೆದಾರರ ನೋಂದಣಿ ರದ್ದು’ ಸೌಲಭ್ಯವನ್ನು ಜಿಎಸ್‌ಟಿಎನ್‌ ಅಂತರ್ಜಾಲ ತಾಣದಲ್ಲಿ ಈಗ ಒದಗಿಸಲಾಗಿದೆ’ ಎಂದು ತಾಣದ ಸಿಇಒ ಪ್ರಕಾಶ್‌ ಕುಮಾರ್‌ ತಿಳಿಸಿದ್ದಾರೆ.

ವಾರ್ಷಿಕ ₹ 20 ಲಕ್ಷದವರೆಗೆ ವಹಿವಾಟು ನಡೆಸುವವರು, ನೋಂದಣಿ ರದ್ದು ಮಾಡಿಕೊಳ್ಳಬಹುದಾಗಿದೆ.

ಅಂತರ್ಜಾಲ ತಾಣದಲ್ಲಿ ಲಾಗಿನ್‌ ಆದ ನಂತರ ಅಲ್ಲಿಯ ವ್ಯಕ್ತಿ ಪರಿಚಯ ವಿಭಾಗದಲ್ಲಿ ಬರುವ ‘REG 29’ ರಲ್ಲಿ ನೋಂದಣಿ ರದ್ದುಪಡಿಸಬಹುದು. ವಾರ್ಷಿಕ ₹ 20 ಲಕ್ಷ ವಹಿವಾಟು ನಡೆಸುವವರಿಗೆ ವಿನಾಯ್ತಿ ನೀಡಲಾಗಿದೆ.

Post Comments (+)