ಸ್ಕೂಟರ್‌ಗೆ ಕ್ಯಾಂಟರ್‌ ಡಿಕ್ಕಿ: ಪತ್ರಿಕಾ ವಿತರಕ ಸಾವು

ಬುಧವಾರ, ಜೂನ್ 19, 2019
28 °C

ಸ್ಕೂಟರ್‌ಗೆ ಕ್ಯಾಂಟರ್‌ ಡಿಕ್ಕಿ: ಪತ್ರಿಕಾ ವಿತರಕ ಸಾವು

Published:
Updated:

ಬೆಂಗಳೂರು: ಹೈಗ್ರೌಂಡ್ಸ್‌ ಬಳಿಯ ಸೌಥ್‌ ರುಚಿಸ್‌ ಹೋಟೆಲ್‌ ಜಂಕ್ಷನ್‌ನಲ್ಲಿ ಬುಧವಾರ ಸ್ಕೂಟರ್‌ಗೆ ಕ್ಯಾಂಟರ್‌ ಡಿಕ್ಕಿ ಹೊಡೆದಿದ್ದರಿಂದ ಸವಾರ ರಾಮಚಂದ್ರನ್‌ (67) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪತ್ರಿಕಾ ವಿತರಕರಾಗಿದ್ದ ಅವರು ಶೇಷಾದ್ರಿಪುರದಲ್ಲಿ ನೆಲೆಸಿದ್ದರು. ಪತ್ರಿಕೆಗಳನ್ನು ಹಂಚಲೆಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಆನಂದರಾವ್ ವೃತ್ತದ ಕಡೆಯಿಂದ ಶಿವಾನಂದ ವೃತ್ತ ಕಡೆಗೆ ಸ್ಕೂಟರ್‌ನಲ್ಲಿ ಹೋಗುವಾಗ ಈ ಅವಘಡ ಸಂಭವಿಸಿದೆ.

‘ಕೆಳಗೆ ಬಿದ್ದ ರಾಮಚಂದ್ರನ್ ಅವರ ಮೈ ಮೇಲೆ ಕ್ಯಾಂಟರ್‌ನ ಹಿಂಬದಿ ಚಕ್ರ ಹರಿದಿದೆ. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ.  ಕ್ಯಾಂಟರ್‌ ಚಾಲಕ ರಾಮವೀರ್ ಸಿಂಗ್‌ ಅವರನ್ನು ಬಂಧಿಸಿದ್ದೇವೆ’ ಎಂದು ಹೈಗ್ರೌಂಡ್ಸ್‌ ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.

‘30 ವರ್ಷಗಳಿಂದ ರಾಮಚಂದ್ರನ್‌ ಅವರು ಪತ್ರಿಕೆಗಳ ವಿತರಕರಾಗಿದ್ದರು. ವಯಸ್ಸಾಗಿದ್ದರಿಂದ ಆ ಕೆಲಸ ಬಿಡುವಂತೆ ಕುಟುಂಬದವರು ಹೇಳಿದ್ದರು. ತಿಂಗಳ ಬಳಿಕ ಕೆಲಸ ಬಿಡುವುದಾಗಿ ಅವರು ಹೇಳಿದ್ದರು. ಅಷ್ಟರಲ್ಲಿ ಈ ಘಟನೆ ನಡೆದಿದೆ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry