ಎಟಿಪಿ ಫೈನಲ್ಸ್‌ಗೆ ಸಿಲಿಕ್‌ ಅರ್ಹತೆ

ಬುಧವಾರ, ಜೂನ್ 26, 2019
25 °C

ಎಟಿಪಿ ಫೈನಲ್ಸ್‌ಗೆ ಸಿಲಿಕ್‌ ಅರ್ಹತೆ

Published:
Updated:
ಎಟಿಪಿ ಫೈನಲ್ಸ್‌ಗೆ ಸಿಲಿಕ್‌ ಅರ್ಹತೆ

ಲಂಡನ್‌ (ರಾಯಿಟರ್ಸ್‌): ಕ್ರೊವೇಷ್ಯಾದ ಆಟಗಾರ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮರಿನ್‌ ಸಿಲಿಕ್‌ ಮತ್ತು ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೊವ್‌ ಅವರು ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯುವ ಎಟಿಪಿ ಫೈನಲ್ಸ್‌ ಟೆನಿಸ್‌ ಟೂರ್ನಿಗೆ ಅರ್ಹತೆ ಗಳಿಸಿದ್ದಾರೆ.

ಈ ವರ್ಷದ ಮೇ ತಿಂಗಳಿನಲ್ಲಿ ನಡೆದಿದ್ದ ಇಸ್ತಾನ್‌ಬುಲ್‌ ಓಪ‍ನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಸಿಲಿಕ್‌, ವಿಂಬಲ್ಡನ್‌ ಮತ್ತು ಕ್ವೀನ್ಸ್‌ ಕ್ಲಬ್‌ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದರು. ಹೀಗಾಗಿ ಅವರ ಫೈನಲ್ಸ್‌ ಹಾದಿ ಸುಗಮವಾಗಿದೆ.

ಬ್ರಿಟನ್‌ನ ಆ್ಯಂಡಿ ಮರ್ರೆ, ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಸ್ಟಾನ್‌ ವಾವ್ರಿಂಕ ಅವರು ಗಾಯದ ಕಾರಣ  ಟೂರ್ನಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಬೆಲ್ಜಿಯಂನ ಡೇವಿಡ್‌ ಗೊಫಿನ್‌ ಮತ್ತು ಸ್ಪೇನ್‌ ಪ್ಯಾಬ್ಲೊ ಬುಸ್ಟಾ ಅವರ ಅರ್ಹತೆಯ ಹಾದಿ ಸುಲಭವಾಗಿದೆ.

ಟೂರ್ನಿ ನವೆಂಬರ್‌ 12ರಿಂದ 19ರವರೆಗೆ ನಡೆಯಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry