ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ಬೃಹತ್ ಮೊತ್ತ

Last Updated 25 ಅಕ್ಟೋಬರ್ 2017, 20:01 IST
ಅಕ್ಷರ ಗಾತ್ರ

ಪರ್ವೇರಿಮ್‌, ಗೋವಾ: ಜೀವನ್‌ಜ್ಯೋತ್‌ ಸಿಂಗ್‌ ಅವರ ದ್ವಿಶತಕ, ಅನ್ಮೋಲ್‌ಪ್ರೀತ್‌ ಸಿಂಗ್ ಮತ್ತು ಗುರುಕೀರತ್ ಸಿಂಗ್ ಮಾನ್‌ ಅವರ ಶಕತದ ಬಲದಿಂದ ಪಂಜಾಬ್‌ ಬೃಹತ್ ಮೊತ್ತ ಪೇರಿಸಿತು. ಇಲ್ಲಿ ಗೋವಾ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ’ಡಿ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಈ ತಂಡ 635 ರನ್‌ ಗಳಿಸಿತು. ಎರಡನೇ ದಿನವಾದ ಬುಧವಾರ ದಿನದಾಟದ ಮುಕ್ತಾಯಕ್ಕೆ ಗೋವಾ ಒಂದು ವಿಕೆಟ್ ಕಳೆದುಕೊಂಡು 94 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್‌

ಎ ಗುಂಪು

ಅಸ್ಸಾಂ: 244ಕ್ಕೆ ಆಲೌಟ್‌; ರೈಲ್ವೇಸ್‌: 81 ಓವರ್‌ಗಳಲ್ಲಿ 2ಕ್ಕೆ224 (ಸೌರಭ್‌ 80, ಶಿವಕಾಂತ್‌ ಶುಕ್ಲಾ 86); ಮಹಾರಾಷ್ಟ್ರ: 312ಕ್ಕೆ ಆಲೌಟ್‌; ಉತ್ತರ ಪ್ರದೇಶ: 68 ಓವರ್‌ಗಳಲ್ಲಿ 7ಕ್ಕೆ232 (ಅಲ್ಮಾಸ್ ಶೌಕತ್‌ 63; ಚಿರಾಗ್ ಖುರಾನ 38ಕ್ಕೆ4).

ಬಿ ಗುಂಪು

ಹರಿಯಾಣ 208ಕ್ಕೆ ಆಲೌಟ್‌ (ಸನ್ನಿ ಗುಪ್ತಾ 67ಕ್ಕೆ4); ಜಾರ್ಖಂಡ್‌: 91 ಓವರ್‌ಗಳಲ್ಲಿ 6ಕ್ಕೆ311 (ಇಶಾಂಕ್ ಜಗ್ಗಿ 127); ಜಮ್ಮು ಮತ್ತು ಕಾಶ್ಮೀರ: 261ಕ್ಕೆ ಆಲೌಟ್‌; ಗುಜರಾತ್‌: 100 ಓವರ್‌ಗಳಲ್ಲಿ 4ಕ್ಕೆ276 (ಮನ್‌ಪ್ರೀತ್ ಜುನೇಜ 66); ಕೇರಳ: 335ಕ್ಕೆ ಆಲೌಟ್‌; ರಾಜಸ್ತಾನ್‌:56.3 ಓವರ್‌ಗಳಲ್ಲಿ 6ಕ್ಕೆ134 (ದಿಶಾಂತ್ ಯಾಗ್ನಿಕ್ 62);

ಸಿ ಗುಂಪು

ಆಂಧ್ರ: 5ಕ್ಕೆ584; ಒಡಿಶಾ: 12 ಓವರ್‌ಗಳಲ್ಲಿ 1ಕ್ಕೆ 32; ಮುಂಬೈ: 374ಕ್ಕೆ ಆಲೌಟ್‌; ತಮಿಳುನಾಡು: 65 ಓವರ್‌ಗಳಲ್ಲಿ 5ಕ್ಕೆ239 (ಬಾಬಾ ಇಂದ್ರಜಿತ್‌ 105); ತ್ರಿಪುರ: 205ಕ್ಕೆ ಆಲೌಟ್‌; ಮಧ್ಯಪ್ರದೇಶ: 66 ಓವರ್‌ಗಳಲ್ಲಿ 7ಕ್ಕೆ201 (ರಜತ್‌ ಪಾಟಿದಾರ್‌79, ಹರಪ್ರೀತ್ ಸಿಂಗ್ 70). 

ಡಿ ಗುಂಪು

ಪಂಜಾಬ್‌: 635ಕ್ಕೆ ಆಲೌಟ್‌ (ಜೀವನ್‌ಜ್ಯೋತ್‌ ಸಿಂಗ್‌ 238, ಅನ್ಮೋಲ್‌ಪ್ರೀತ್‌ ಸಿಂಗ್ 113, ಗುರುಕೀರತ್ ಸಿಂಗ್ ಮಾನ್‌ 114), ಗೋವಾ: 29 ಓವರ್‌ಗಳಲ್ಲಿ 1ಕ್ಕೆ 94; ಹಿಮಾಚಲ ಪ್ರದೇಶ: 364ಕ್ಕೆ ಆಲೌಟ್‌ (ನಿಖಿಲ್ ಗಂಗ್ಟಾ 130; ವಿಕಾಸ್‌ ಯಾದವ್ 94ಕ್ಕೆ5); ಸರ್ವಿಸಸ್‌: 61 ಓವರ್‌ಗಳಲ್ಲಿ 6ಕ್ಕೆ153; ಛತ್ತೀಸಗಢ: 489ಕ್ಕೆ ಆಲೌಟ್‌ (ಅಶುತೋಷ್ ಸಿಂಗ್‌ 113, ಅಮನ್‌ದೀಪ್‌ ಖಾರೆ 210); ವಿದರ್ಭ: 13 ಓವರ್‌ಗಳಲ್ಲಿ 1ಕ್ಕೆ31.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT