ಟೆನಿಸ್‌: ಕ್ವಾರ್ಟರ್‌ಗೆ ಯೂಕಿ

ಭಾನುವಾರ, ಜೂನ್ 16, 2019
22 °C
ಭಾರತದ ಆಟಗಾರನ ಗೆಲುವಿನ ಓಟ

ಟೆನಿಸ್‌: ಕ್ವಾರ್ಟರ್‌ಗೆ ಯೂಕಿ

Published:
Updated:

ನವದೆಹಲಿ: ವಿಯೆಟ್ನಾಂ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಯೂಕಿ ಭಾಂಬ್ರಿ ಗೆಲುವಿನ ಓಟ ಮುಂದುವರಿದಿದೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಆಟಗಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಬುಧವಾರ ನಡೆದ 16ರ ಘಟ್ಟದ ಹೋರಾಟದಲ್ಲಿ ಯೂಕಿ 6–3, 6–1ರ ನೇರ ಸೆಟ್‌ಗಳಿಂದ ಚೀನಾ ತೈಪೆಯ ತಿ ಚೆನ್‌ ಸವಾಲು ಮೀರಿ ನಿಂತರು. ಈ ಮೂಲಕ ಚೆನ್‌ ವಿರುದ್ಧದ ಗೆಲುವಿನ ದಾಖಲೆಯನ್ನು 4–0ಗೆ ಹೆಚ್ಚಿಸಿಕೊಂಡರು.

ಯೂಕಿ ಆರಂಭಿಕ ಸೆಟ್‌ನಲ್ಲಿ ಶರವೇಗದ ಸರ್ವ್‌ಗಳನ್ನು ಸಿಡಿಸಿ ಚೆನ್‌ ಅವರನ್ನು ಕಂಗೆಡಿಸಿದ ಅವರು ನೆಟ್‌ನ ಸಮೀಪದಲ್ಲಿ ಚೆಂಡನ್ನು ಡ್ರಾಪ್‌ ಮಾಡುವಲ್ಲಿ ಸಫಲರಾದರು.

ಇದರೊಂದಿಗೆ ಶೀಘ್ರ ಮುನ್ನಡೆ ಗಳಿಸಿದ ಭಾರತದ ಆಟಗಾರ, ಆ ಬಳಿಕವೂ ಆಕ್ರಮಣಕಾರಿ ಆಟದಿಂದ ಮಿಂಚು ಹರಿಸಿದರು. ಯೂಕಿ,  ರ‍್ಯಾಕೆಟ್‌ ನಿಂದ ಸಿಡಿಯುತ್ತಿದ್ದ ಸರ್ವ್‌ಗಳಿಗೆ ಚೆನ್‌ ನಿರುತ್ತರರಾದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry