ಬಂಡವಾಳ ಹೂಡಿಕೆದಾರರ ಸಮಾವೇಶ ನ.2ರಂದು

ಸೋಮವಾರ, ಮೇ 27, 2019
24 °C
‘ರೈತರ ಕನಸು ಶೀಘ್ರ ನನಸಾಗಲಿ’

ಬಂಡವಾಳ ಹೂಡಿಕೆದಾರರ ಸಮಾವೇಶ ನ.2ರಂದು

Published:
Updated:

ಬಾಗಲಕೋಟೆ: ರಾಜ್ಯ ಸರ್ಕಾರ ಸಿ.ಐ.ಐ ಕಾಸಿಯಾ ಸಹಯೋಗದಲ್ಲಿ ನವೆಂಬರ್ 2 ರಂದು ಬೆಳಿಗ್ಗೆ 10.30 ಗಂಟೆಗೆ ಬೆಳಗಾವಿಯ ಖಾನಾಪೂರ ರಸ್ತೆಯಲ್ಲಿರುವ ಉದ್ಯಮ ಭಾಗದ ಸಭಾಂಗಣದಲ್ಲಿ ಸರಬರಾಜುದಾರರ ಹಾಗೂ ಬಂಡವಾಳ ಹೂಡಿಕೆದಾರರ ವಿಭಾಗ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಈ ಸಮಾವೇಶದ ಮೂಲ ಉದ್ದೇಶ ತಯಾರಕರನ್ನು ಮತ್ತು ಬಳಕೆದಾರರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಎಂ.ಎಸ್.ಎಂ.ಇ ಕ್ಷೇತ್ರಕ್ಕೆ ಮಾರುಕಟ್ಟೆ ಸಹಾಯ ನೀಡುವ ಜೊತೆಗೆ ಬಂಡವಾಳ ಹೂಡಿಕೆ ಆಕರ್ಷಿಸುವುದಾಗಿದೆ.

ಈ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಉದ್ದಿಮೆದಾರರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry