ಭಾಲ್ಕಿ: ಲಘು ಭೂಕಂಪ ಗ್ರಾಮಸ್ಥರಿಗೆ ಆತಂಕ

ಭಾನುವಾರ, ಮೇ 26, 2019
30 °C

ಭಾಲ್ಕಿ: ಲಘು ಭೂಕಂಪ ಗ್ರಾಮಸ್ಥರಿಗೆ ಆತಂಕ

Published:
Updated:
ಭಾಲ್ಕಿ: ಲಘು ಭೂಕಂಪ ಗ್ರಾಮಸ್ಥರಿಗೆ ಆತಂಕ

ಭಾಲ್ಕಿ: ತಾಲ್ಲೂಕಿನ ತರನಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ 7.30ರ ಸುಮಾರಿಗೆ 6 ರಿಂದ 7 ಕ್ಷಣಗಳವರೆಗೆ ಭೂಮಿ ನಡುಗಿದ ಪರಿಣಾಮ ಜನರು ಆತಂಕಕ್ಕೆ ಒಳಗಾದರು.

‘ಭೂಮಿ ನಡುಗಿದ್ದರಿಂದ ಮನೆಯ ಅಟ್ಟಣಿಗೆಯಲ್ಲಿಟ್ಟಿದ ಕೆಲ ಸಾಮಾನುಗಳು ಕೆಳಗೆ ಬಿದ್ದಿವೆ. ಗ್ರಾಮದ ಹೆಚ್ಚಿನ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಯಲಿನಲ್ಲಿ ಜಮಾವಣೆಗೊಂಡಿದ್ದರು’ ಎಂದು ಗ್ರಾಮಸ್ಥ ಮಲ್ಲಿಕಾರ್ಜುನ ಚಳಕಾಪೂರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮಕ್ಕೆ ತಹಶೀಲ್ದಾರ್‌ ಮನೋಹರ ಸ್ವಾಮಿ, ಡಿವೈಎಸ್ಪಿ ವಿ.ಎಸ್‌.ಪಾಟೀಲ, ಪಿಎಸ್‌ಐ ವಿಜಯಕುಮಾರ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿದರು.

‘ಭೂಕಂಪದಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ, ಗೋಡೆ ಬಿರುಕು ಬಿಟ್ಟಿಲ್ಲ. ಅಗತ್ಯ ಮಾಹಿತಿ ಪಡೆಯುತ್ತಿದ್ದೇವೆ’ ಎಂದು ತಹಶೀಲ್ದಾರ್‌ ಮನೋಹರಸ್ವಾಮಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry