ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಸಂಸ್ಕೃತಿಯ ಉಳಿವು ಅನಿವಾರ್ಯ

ಚಿಂತಾಮಣಿಯ ಶಿಲ್ಪ ವೃದ್ಧಾಶ್ರಮದಲ್ಲಿ ಏರ್ಪಡಿಸಿದ್ದ ಜಾನಪದ ಸುಗ್ಗಿ ಕಾರ್ಯಕ್ರಮದಲ್ಲಿ ತಜ್ಞ ಡಾ. ರಘು ಅನಿಸಿಕೆ
Last Updated 26 ಅಕ್ಟೋಬರ್ 2017, 7:08 IST
ಅಕ್ಷರ ಗಾತ್ರ

ಚಿಂತಾಮಣಿ: ಮೊಬೈಲ್ ಮೆಸೇಜ್, ಫೇಸ್ ಬುಕ್, ವಾಟ್ಸ್ ಅಪ್‌ಗಳಿಂದ ಜನಪದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೇಸಿ ಚರಿತ್ರೆ ಪತ್ರಿಕೆಯ ಸಂಪಾದಕ ಡಾ.ಎಂ.ಎನ್‌.ರಘು ಅಭಿಪ್ರಾಯಪಟ್ಟರು.

ನಗರದ ಶಿಲ್ಪ ವೃದ್ಧಾಶ್ರಮ ಹಾಗೂ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಸುಗ್ಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಧ್ಯಮಗಳಲ್ಲಿ ನೋಡಿ ಜನಪದ ಕಲೆಯನ್ನು ಕಲಿಯಬಹುದು ಎಂಬುದು ಸರಿಯಲ್ಲ, ಪ್ರಾಯೋಗಿಕವಾಗಿ ಪಾಲ್ಗೊಳ್ಳುವ ಮೂಲಕ ಕಲಿಯುವ ಅನುಭವ ಸ್ಥಿರವಾಗಿ ಉಳಿಯುತ್ತದೆ. ಯುವಜನರು ಜನಪದ ಸೊಗಡನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೂ ಸಿಗುವಂತೆ ಮಾಡುವುದರ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಕಾಗತಿ ವೆಂಕಟರತ್ನಂ ಮಾತನಾಡಿ, ಜನಪದ ಸಂಸ್ಕೃತಿಯನ್ನು ಉಳಿಸಲು ಕಲಾವಿದರನ್ನು ಪ್ರೋತ್ಸಾಹಿ ಸುವ ಅಗತ್ಯವಿದೆ. ಇಂದಿನ ತಲೆಮಾರಿನ ಜನರು ದೂರದರ್ಶನ, ಸಿನಿಮಾ, ಮೊಬೈಲ್‌ನಲ್ಲಿ ಮುಳುಗಿದ್ದಾರೆ. ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.

ಹಬ್ಬಗಳ ಸಂದರ್ಭದಲ್ಲಿ ಆಚರಣೆಯಲ್ಲಿದ್ದ ಕೇಳಿಕೆ ಪದ, ಕೋಲಾಟ, ಸುಗ್ಗಿ ಪದ, ಗೊಬ್ಬಿಯಾಲು ಮುಂತಾದವನ್ನು ನೋಡುವ ಸನ್ನಿವೇಶಗಳು ಅಪರೂಪವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕಲಾ ತಂಡವನ್ನು ಕಟ್ಟಿ ಜಾನಪದ ಕಲೆಗಳ ಪ್ರದರ್ಶನವನ್ನು ನೀಡುತ್ತಿರುವ ಮೂಡಲ ಗೊಲ್ಲಹಳ್ಳಿ ಕೆ.ನರಸಿಂಹಪ್ಪ ಅವರ ಸೇವೆ ಶ್ಲಾಘನೀಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹ ನೀಡಿರುವುದು ಅರ್ಥಪೂರ್ಣವಾಗಿದೆ ಎಂದರು.

ವೃದ್ಧಾಶ್ರಮ ಹಾಗೂ ಶಾಲೆಯ ಅಧ್ಯಕ್ಷ ಕೆ.ಆರ್‌.ನರಸಿಂಹಪ್ಪ ಮಾತನಾಡಿ, ಜನಪದ ಗೀತೆಗಳ ಕಾರ್ಯಕ್ರಮ ಆಶ್ರಮದಲ್ಲಿನ ಫಲಾನುಭವಿಗಳಲ್ಲಿ ಚೈತನ್ಯ ಮತ್ತು ಭರವಸೆ ಮೂಡಿಸಿದೆ. ಜಾತ್ರೆ, ಹಬ್ಬಗಳಲ್ಲಿ ಪಾಲ್ಗೊಳ್ಲಲು ಸಾಧ್ಯವಾಗದ ಆಶ್ರಮ ವಾಸಿಗಳಿಗೆ ಅನುಕೂಲವಾಗುವಂತೆ ಕಾರ್ಯಕ್ರಮದ ಪ್ರಾಯೋಜಕತ್ವ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಕಲಾವಿದ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ, ಮುನಿರಾಜು, ಹರೀಶ್‌, ಸುದರ್ಶನ್‌, ಶರೀಷ್, ಕಾವೇರಿ, ಅಕ್ಷಯಾ, ಸ್ವಾತಿ, ಗಾಯಿತ್ರಿ ತಂಡ ಜಾನಪದ ಗೀತೆಗಳ ಗಾಯನ ಮಾಡಿದರು.ಶಾಲೆಯ ಟ್ರಸ್ಟ್‌ ಕಾರ್ಯದರ್ಶಿ ಜೆ.ಕೆ.ನಿರ್ಮಲಮ್ಮ, ಮುಖ್ಯ ಶಿಕ್ಷಕಿ ಭಾಗ್ಯಮ್ಮ, ಕಲಾವಿದೆ ಕೀರ್ತಿ ಬಸಪ್ಪ ಲಗಳಿ, ಶಿಕ್ಷಕ ಎಚ್‌.ಕೆ. ನಾರಾಯಣಸ್ವಾಮಿ, ಅರ್ಜುನ, ಮುಕ್ತಿಯಾರ್‌ ಪಾಷಾ, ಬಿ.ರೋಜ್‌ಮೇರಿ, ಕವಿತಾ, ತನುಜಾ, ಜಯಲಕ್ಷ್ಮೀ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT