ಸೋಮವಾರ, ಸೆಪ್ಟೆಂಬರ್ 16, 2019
29 °C

ತಾಜ್ ಮಹಲ್‌ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಯೋಗಿ ಆದಿತ್ಯನಾಥ್

Published:
Updated:
ತಾಜ್ ಮಹಲ್‌ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಯೋಗಿ ಆದಿತ್ಯನಾಥ್

ಆಗ್ರಾ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ಗೆ ಭೇಟಿ ನೀಡಿ ಅಲ್ಲಿನ ಪಶ್ಚಿಮ ದ್ವಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಬೆಳಗ್ಗೆ ಆಗ್ರಾಗೆ ಬಂದ ಯೋಗಿ ಆದಿತ್ಯನಾಥ್‌ ತಾಜ್‌ ಮಹಲ್‌ ಆವರಣಕ್ಕೆ ತೆರಳಿ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ವಚ್ಛತಾ ಅಭಿಯಾನ ನಡೆಸಿದರು. ಇಂದು ಆಗ್ರಾದ ಪ್ರಮುಖ ಸ್ಮಾರಕಗಳಿಗೂ ಭೇಟಿ ನೀಡಲಿದ್ದಾರೆ. ಆಗ್ರಾದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಯೋಗಿ ಆದಿತ್ಯನಾಥ್ ₹ 300 ಕೋಟಿ ಆರ್ಥಿಕ ನೆರವು ಘೋಷಣೆ ಮಾಡಿದ್ದಾರೆ.

ಈ ಹಿಂದೆ ತಾಜ್‌ ಮಹಲ್‌ ಕುರಿತಂತೆ ಬಿಜೆಪಿ ನಾಯಕರು ವಿವಾದತ್ಮಾಕ ಹೇಳಿಕೆ ನೀಡಿದ್ದರು. ಉತ್ತರ ಪ್ರದೇಶ ಸರ್ಕಾರ ಪ್ರವಾಸಿ ತಾಣಗಳ ಪಟ್ಟಿಯಿಂದ ತಾಜಮಹಲ್‌ನ್ನು ಕೈಬಿಟ್ಟಿತ್ತು.  ಇದಾದ ನಂತರ ಬಿಜೆಪಿ ನಾಯಕರು 'ತಾಜಮಹಲ್ ಭಾರತೀಯ ಸಂಸ್ಕೃತಿಯಲ್ಲಿ ಒಂದು ಕಪ್ಪು ಚುಕ್ಕೆ' ಎಂದಿದ್ದರು.  ಇದೀಗ ಯೋಗಿ ಆದಿತ್ಯನಾಥ್ ತಾಜ್‌ಮಹಲ್‌ಗೆ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

 

Post Comments (+)