ಮಂಗಳವಾರ, ಸೆಪ್ಟೆಂಬರ್ 17, 2019
25 °C

ಗೋವಾದಲ್ಲಿ ಚುಟುಕು ಸಮ್ಮೇಳನ

Published:
Updated:

ಹುಬ್ಬಳ್ಳಿ: ಕನಾ೯ಟಕ ಚುಟುಕು ಸಾಹಿತ್ಯ ಪರಿಷತ್ತಿನ ಆರನೇ ಸಮ್ಮೇಳನವನ್ನು ಗೋವಾದಲ್ಲಿ ಡಿಸೆಂಬರ್‌ನಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಪ್ರಸಾರಾಂಗ ನಿದೇ೯ಶಕ ಚನ್ನಬಸಪ್ಪ ಧಾರವಾಡಶೆಟ್ರು ಹೇಳಿದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಗೋವಾ ಕಡಲ ತೀರದಲ್ಲಿ ಕನ್ನಡಿಗರಿಗಾದ ಅನ್ಯಾಯಕ್ಕೆ ಧ್ವನಿ ನೀಡಲು, ಸರ್ಕಾರದ ಯಾವುದೇ ಅನುದಾನವಿಲ್ಲದೇ ಏರ್ಪಡಿಸಿರುವ ಸಮ್ಮೇಳನಕ್ಕೆ ಕನ್ನಡದ ಸಂಘ, ಸಂಸ್ಥೆಗಳು, ಮಠಾಧೀಶರು ಹಾಗೂ ಸಾಹಿತಿಗಳು ಆಸಕ್ತರು ಸಹಕಾರ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಸಕ್ತರು ಕನಾ೯ಟಕ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಅವರ ಮೊ.ಸಂ. 94821 81305 ಸಂಪರ್ಕಿಸಬಹುದು.

Post Comments (+)