ಭಾನುವಾರ, ಸೆಪ್ಟೆಂಬರ್ 22, 2019
23 °C

6ನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ ಸರ್ಕಾರಿ ನೌಕರರ ಪ್ರತಿಭಟನೆ

Published:
Updated:

ಅಫಜಲಪುರ: ಸರ್ಕಾರ 6ನೇ ವೇತನ ಆಯೋಗ ಅನುಷ್ಠಾನ ಮತ್ತು ಶೇ 30 ಮಧ್ಯಂತರ ಪರಿಹಾರ ನೀಡಲು ಆಗ್ರಹಿಸಿ ಬುಧವಾರ ತಹಶೀಲ್ದಾರ ಕಚೇರಿ ಮುಂದೆ ತಾಲ್ಲೂಕು ನೌಕರರ ಸಂಘದವರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಶೈಲ ಮ್ಯಾಳೇಸಿ ಹಾಗೂ ಮಲ್ಲಿಕಾರ್ಜುನ ಯಂಕಂಚಿ ಮಾತನಾಡಿ, ಕೇಂದ್ರ ಸರ್ಕಾರ ನೌಕರರ ಸಮಾನ ವೇತನ ರಾಜ್ಯ ಸರ್ಕಾರ ನೌಕರರಿಗೂ ದೊರೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಿಕ್ಷಕರ ಸಂಘದ ಮುಖಂಡರಾದ ಸಂಜೀವ ಬಗಲಿ ಹಾಗೂ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸಿದ್ದು ಗುಣಾರಿ 6ನೇ ವೇತನ ಕುರಿತು ಮಾತನಾಡಿದರು.

ಪ್ರತಿಭಟನೆಯಲ್ಲಿ ಶಿಕ್ಷಕರ ಸಂಘದ ಮುಖಂಡರಾದ ಮಲ್ಲಿಕಾರ್ಜುನ ಚವಡಿಹಾಳ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಷ ಜೇವರ್ಗಿ, ಬಿ.ಎಂ.ರಾವ್‌, ನಿಂಗಣ್ಣ ಪೂಜಾರಿ, ಶಿವಾನಂದ ಚಿನ್ಮಳ್ಳಿ, ರಾಮಣ್ಣ ಬೂದಿಹಾಳ, ಸಂಗು ಸುರಗೊಂಡ, ಅಶೋಕ ಸಿತಾಳೆ, ತುಕಾರಾಮ ಮತ್ತಿತರರು ಇದ್ದರು.

ತಹಶೀಲ್ದಾರ ಪರವಾಗಿ ಶಿರಸ್ತೇದಾರ ಗಾಳೆಪ್ಪ ಅವರು ಮನವಿ ಸ್ವೀಕರಿಸಿ, ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.

Post Comments (+)