ಬಾಲಕನ ಕೆನ್ನೆ ಕಿತ್ತ ಬೀದಿನಾಯಿಗಳು

ಶನಿವಾರ, ಮೇ 25, 2019
22 °C

ಬಾಲಕನ ಕೆನ್ನೆ ಕಿತ್ತ ಬೀದಿನಾಯಿಗಳು

Published:
Updated:
ಬಾಲಕನ ಕೆನ್ನೆ ಕಿತ್ತ ಬೀದಿನಾಯಿಗಳು

ಸೇಡಂ (ಕಲಬುರ್ಗಿ ಜಿಲ್ಲೆ): ಪಟ್ಟಣದಲ್ಲಿ ಮಂಗಳವಾರ ಸಂಜೆ ಬೀದಿನಾಯಿಗಳು ರೆಹಮತ್ ನಗರದ ಮೂರು ವರ್ಷದ ಬಾಲಕ ಮಹ್ಮದ್ ತಬರೇಜ್ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮಾಂಸದ ಅಂಗಡಿ ಮುಂದೆ 50-60 ನಾಯಿಗಳು ನಿತ್ಯ ನಿಲ್ಲುತ್ತವೆ. ಹಿಂದೆಯೂ ಕೆಲವರಿಗೆ ಕಚ್ಚಿವೆ. ಮಾಂಸದ ಅಂಗಡಿ ಸ್ಥಳಾಂತರಿಸಬೇಕು ಹಾಗೂ ಗಾಯಗೊಂಡ ಬಾಲಕನ ಕುಟುಂಬಕ್ಕೆ ಪರಿಹಾರ ಮತ್ತು ವೈದ್ಯಕೀಯ ವೆಚ್ಚ ಭರಿಸಬೇಕು’ ಎಂದು ಅಲ್ಲಿಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಬಿ.ಸುಶೀಲಾ, ಮಾಂಸದ ಅಂಗಡಿ ಮುಚ್ಚುವಂತೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry