ಟೈಗರ್ ಗಲ್ಲಿ

ಗುರುವಾರ , ಜೂನ್ 27, 2019
26 °C

ಟೈಗರ್ ಗಲ್ಲಿ

Published:
Updated:

ರವಿ ಶ್ರೀವತ್ಸ ನಿರ್ದೇಶನದ ಸಿನಿಮಾ ಇದು. ಯೋಗೇಶ್ ಇದರ ನಿರ್ಮಾಪಕರು. ನೀನಾಸಂ ಸತೀಶ್ ಅವರು ಈ ಸಿನಿಮಾದಲ್ಲಿ ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾವನಾ ರಾವ್, ರೋಶಿನಿ ಪ್ರಕಾಶ್ ಚಿತ್ರದ ನಾಯಕಿಯರು. ಶ್ರೀಧರ್ ವಿ. ಸಂಭ್ರಮ್ ಸಂಗೀತ ಈ ಚಿತ್ರಕ್ಕೆ ಇದೆ.

*

ಸರ್ವಸ್ವ

ಶ್ರೇಯಸ್ ಕಬಾಡಿ ನಿರ್ದೇಶನದ ಚಿತ್ರ ಇದು. ತಿಲಕ್ ಈ ಚಿತ್ರದ ನಾಯಕ. ವಿಮಲ್ ಮತ್ತು ವಾಮದೇವ್ ಇದರ ನಿರ್ಮಾಪಕರು. ಶ್ರೀಧರ್ ವಿ. ಸಂಭ್ರಮ್ ಸಂಗೀತ, ಭೂಪಿಂದರ್‍ ಪಾಲ್‍ ಸಿಂಗ್ ರೈನಾ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.

*

ಮೋಜೊ

ಶ್ರೀಶ ಬೆಳಕವಾಡಿ ನಿರ್ದೇಶನದ, ಹಾರರ್ – ಥ್ರಿಲ್ಲರ್ ಕಥಾಹಂದರದ ಸಿನಿಮಾ ಇದು. ಚಿತ್ರದ ನಿರ್ಮಾಣ ಗಜಾನನ ಭಟ್ ಅವರದ್ದು. ಮನು ಹಾಗೂ ಅನುಷಾ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ, ಅನಂತ ಅರಸ್ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. ಸಂದೀಪ್ ಶ್ರೀಧರ್, ನಂದನ್ ಜಾಂಟಿ, ಸ್ಮಿತಾ ಕುಲಕರ್ಣಿ, ಆನ್ಯಾ ಶೆಟ್ಟಿ ತಾರಾಬಳಗದಲ್ಲಿದ್ದಾರೆ.

*

ಬ್ರ್ಯಾಂಡ್

ಕುಮಾರ್ ಎನ್. ಬಂಗೇರ ನಿರ್ಮಾಣದ ಚಿತ್ರ ಇದು. ಪ್ರಶಾಂತ ಕೆ. ಶೆಟ್ಟಿ ಇದರ ನಿರ್ದೇಶಕರು. ಕಾರ್ ಡೀಲರ್ ಒಬ್ಬನ ಆಸೆ, ಆಕಾಂಕ್ಷೆ, ಜೀವನದ ಕಥೆ ಈ ಚಿತ್ರದಲ್ಲಿದೆ. ವಿನು ಮನಸು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ರಶಾಂತ ಶೆಟ್ಟಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ರಚಿತಾ ಹಾಗೂ ಸೌಮ್ಯಾ ಚಿತ್ರದ ನಾಯಕಿಯರು. ಸಂಚಾರಿ ವಿಜಯ್ ಗೌರವ ಪಾತ್ರದಲ್ಲಿದ್ದಾರೆ. ಶೋಭರಾಜ್, ಗುರುರಾಜ ಹೊಸಕೋಟೆ, ಮಲ್ಲೇಶ್ ತಾರಾಬಳಗದಲ್ಲಿದ್ದಾರೆ.

*

ಡಮ್ಕಿ ಡಮಾರ್

ಸದ್ಗುಣ ಮೂರ್ತಿ ನಿರ್ಮಿಸಿರುವ, ಪ್ರದೀಪ್‍ ವರ್ಮಾ ನಿರ್ದೇಶನದ ಸಿನಿಮಾ ಇದು. ವೇಲ್ಸ್ ಛಯಾಗ್ರಹಣ ಚಿತ್ರಕ್ಕಿದೆ. ಪ್ರದೀಪ್ ವರ್ಮಾ, ಚೈತ್ರಾ ಶೆಟ್ಟಿ, ಜಗದೀಶ್, ವೆಂಕಿ, ಅನುಷ್ಕ ಶೆಟ್ಟಿ ತಾರಾಬಳಗದಲ್ಲಿ ಇದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry