ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಲೆಕ್ಕಿಗರಿಗೆ ಬೆಳೆ ಸಮೀಕ್ಷೆ, ಜನರಿಗೆ ಸಂಕಷ್ಟ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 26 ಅಕ್ಟೋಬರ್ 2017, 11:14 IST
ಅಕ್ಷರ ಗಾತ್ರ

ಕಾರ್ಕಳ: ಗ್ರಾಮ ಪಂಚಾಯಿತಿಯ ಎಲ್ಲ ವಿ.ಎ.ಗಳು ಬೆಳೆ ಸಮೀಕ್ಷೆಗೆ ತೆರಳಿದ ಪರಿಣಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಗಳು ವಿಳಂಬವಾಗುತ್ತಿವೆ. ಇದರಿಂದ ಜನರಿಗೆ ಸಂಕಷ್ಟವಾಗುತ್ತಿದೆ ಎಂದು ಸದಸ್ಯ ಹರೀಶ್ ಆರೋಪಿಸಿದರು.

ನಗರದ ತಾಲ್ಲೂಕು ಪಂಚಾಯಿತಿಯ ಉಣ್ಣಿಕೃಷ್ಣನ್ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ವಿ.ಎ. ಅರ್ಧ ದಿನವಾದರೂ ಪಂಚಾಯಿತಿಯಲ್ಲಿ ಉಳಿಯುವಂತೆ ಮಾಡಬೇಕು. ಇಲ್ಲದಿದ್ದರೆ ಜನರು ಪರದಾಡಬೇಕಾಗುತ್ತದೆ ಎಂದರು. ಸದಸ್ಯ ಅಶೋಕ್ ಶೆಟ್ಟಿ ಇದಕ್ಕೆ ದನಿಗೂಡಿಸಿ ಬೆಳೆ ಸಮೀಕ್ಷೆ ಎಲ್ಲ ಪೂರ್ಣಗೊಳ್ಳುವಾಗ ಸುಮಾರು ಆರು ತಿಂಗಳು ಕಳೆಯಬಹುದು. ಇದರಿಂದ ಸಮಸ್ಯೆಯಾಗಲಿದೆ ಎಂದರು. ಇದಕ್ಕೆ ಅಧ್ಯಕ್ಷೆ ಪ್ರತಿಕ್ರಿಯಿಸಿ ಈ ಕುರಿತು ಜಿಲ್ಲಾ ಪಂಚಾಯಿತಿ ಸಭೆಯಲ್ಲಿಯೂ ಪ್ರಸ್ತಾಪವಾಗಿದೆ ಎಂದರು.

ಕಂದಾಯ ಇಲಾಖಾಧಿಕಾರಿ ಮಾತನಾಡಿ, ಇದು ಸರ್ಕಾರದ ಸುತ್ತೋಲೆ. ವಿ.ಎ.ಗಳು ಮಾಡುವ ಕೆಲಸಗಳನ್ನು ಕಂದಾಯ ನಿರೀಕ್ಷಕರಿಂದ ಸಾಧ್ಯವಾದರೆ ಮಾಡಿಕೊಡಲಾಗುವುದು ಎಂದರು.

ಜಿಲ್ಲೆಯಲ್ಲಿ ಪಡಿತರ ಚೀಟಿ ಯಶಸ್ವಿ ಯಾಗಿ ವಿತರಣೆಯಾಗುತ್ತಿರುವ ಕುರಿತು ಉಸ್ತುವಾರಿ ಸಚಿವರು ಜಾಹೀರಾತು ನೀಡುತ್ತಿದ್ದಾರೆ ಎಂದು ತಿಳಿಸಿದ ಸದಸ್ಯ ಹರೀಶ್ ನಾಯಕ್, ಅದು ಉಡುಪಿಗಷ್ಟೇ ಸೀಮಿತವಾಗಿರಬಹುದು. ತಾಲ್ಲೂಕಿನಲ್ಲಿ ಪಡಿತರ ಚೀಟಿ ವಿತರಣೆಯಾಗುತ್ತಿಲ್ಲ. ಪಡಿತರ ಚೀಟಿ ಸಿಗದವರು ಏನು ಮಾಡ ಬೇಕು ಎಂದರು. ಅಧ್ಯಕ್ಷೆ ಅಧಿಕಾರಿಗಳಿಗೆ ತಾಲ್ಲೂಕಿನಲ್ಲಿ ರೇಶನ್ ಕಾರ್ಡ್‌ಗಳ ವಿತರಣೆಗೆ ಸಮರ್ಪಕ ಕ್ರಮಕೈಗೊಳ್ಳಲು ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ವಚ್ಛ ವಿದ್ಯಾಲಯ್ ಪುರಸ್ಕಾರ ಪಡೆದ ನಗರದ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಪೆವಾಜೆ ಹಾಗೂ ಸೂಡ ಶಾಲೆಯನ್ನು ಗುರುತಿಸಿ ಅಭಿನಂದಿಸಲಾಯಿತು. ನಾಮನಿ ರ್ದೇಶಿತ ಸದಸ್ಯರಾಗಿ ಸಂದೀಪ್ ಚಾರ, ಶ್ವೇತಾ ಶೆಟ್ಟಿ ಬಲೂರು, ದೇವಕಿ ದುರ್ಗ, ಶುಭಾ ಶೆಟ್ಟಿ ಮುಂಡ್ಕೂರು, ಜಯ ಕೋಟ್ಯಾನ್ ಕಾಂತಾವರ, ಜಯಂತಿ ನಂದಳಿಕೆ ಅವರ ಆಯ್ಕೆ ನಡೆಯಿತು.

ಅಧ್ಯಕ್ಷೆ ಮಾಲಿನಿ ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ನಿರ್ವಹ ಣಾಧಿಕಾರಿ ಕೇಶವ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಸಮಾರೋಪ
ಬ್ರಹ್ಮಾವರ
: ನಗರದ ಕಾಸ್ಮೋಪಾಲಿಟನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳು ದಿನಗಳ ಕಾಲ ನಡೆದ ಎಸ್‌.ಎಂ.ಎಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 15ನೇ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಸಂಸ್ಥೆಯ ಪ್ರಾಂಶುಪಾಲ ಐವನ್‌ ದೊನಾತ್ ಸುವಾರಿಸ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್‌.ಎಂ.ಎಸ್ ಕೆಥೆಡ್ರಲ್‌ನ ಸಹಾಯಕ ಧರ್ಮಗುರು ಫಾ.ಜೋಸೆಫ್‌ ಚಾಕೋ ಶಿಬಿರಾರ್ಥಿಗಳಿಗೆ ಹಿತವಚನ ನೀಡಿದರು. ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಥಾಮಸ್‌ ಡಿಸೋಜ, ಝಾನ್ಸಿ ಬಾರ್ನೆಸ್‌, ವಿದ್ಯಾರ್ಥಿ ನಾಯಕಿ ಶಬನಮ್, ಸ್ವಾತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT