ಫ್ರೆಂಚ್‌ ಓಪನ್‌ ಸೂಪರ್‌ ಸೀರಿಸ್‌: ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಶ್ರೀಕಾಂತ್‌, ಪಿ.ವಿ. ಸಿಂಧು

ಭಾನುವಾರ, ಜೂನ್ 16, 2019
22 °C

ಫ್ರೆಂಚ್‌ ಓಪನ್‌ ಸೂಪರ್‌ ಸೀರಿಸ್‌: ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಶ್ರೀಕಾಂತ್‌, ಪಿ.ವಿ. ಸಿಂಧು

Published:
Updated:
ಫ್ರೆಂಚ್‌ ಓಪನ್‌ ಸೂಪರ್‌ ಸೀರಿಸ್‌: ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಶ್ರೀಕಾಂತ್‌, ಪಿ.ವಿ. ಸಿಂಧು

ಪ್ಯಾರಿಸ್‌: ಇಲ್ಲಿ ನಡೆದ ಫ್ರೆಂಚ್‌ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಗುರುವಾರ ಭಾರತದ ಭರವಸೆ ಆಟಗಾರ ಕಿದಂಬಿ ಶ್ರೀಕಾಂತ್‌ ಹಾಗೂ ಪಿ.ವಿ. ಸಿಂಧು ಶುಭಾರಂಭ ಮಾಡಿದ್ದು, ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ಡೆನ್ಮಾರ್ಕ್‌ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿದಂಬಿ ಶ್ರೀಕಾಂತ್‌ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದರು.

ಜರ್ಮನಿ ಆಟಗಾರ ಫ್ಯಾಬಿಯನ್ ರೋತ್ ಹಾಗೂ ಶ್ರೀಕಾಂತ್‌ ನಡುವೆ ನಡೆಯುತ್ತಿದ ಪಂದ್ಯದಲ್ಲಿ(0–3) ಆಟದ ಮಧ್ಯೆ ಫ್ಯಾಬಿಯನ್ ರೋತ್ ನಿವೃತ್ತಿ ಘೋಷಿಸಿದ ಕಾರಣ ಶ್ರೀಕಾಂತ್‌ಗೆ ಜಯ ಲಭಿಸಿತು.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವ ಚಾಂಪಿಯನ್ಸ್‌ ಸ್ಪೇನ್‌ ಆಟಗಾರ್ತಿ ಬೀಟ್ರಿಜ್ ಕಾರ್ರಲಾಸ್‌ ವಿರುದ್ಧ ಪಿ.ವಿ.ಸಿಂಧು 21–12, 21–14ರಲ್ಲಿ ನೇರ ಗೇಮ್‌ಗಳಿಂದ ಜಯ ಸಾಧಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry