ಆಮಿ ಜಾಕ್ಸನ್‌ಗೆ ಸಲ್ಲು ಜತೆ ನಟಿಸುವಾಸೆ

ಮಂಗಳವಾರ, ಜೂನ್ 18, 2019
23 °C

ಆಮಿ ಜಾಕ್ಸನ್‌ಗೆ ಸಲ್ಲು ಜತೆ ನಟಿಸುವಾಸೆ

Published:
Updated:
ಆಮಿ ಜಾಕ್ಸನ್‌ಗೆ ಸಲ್ಲು ಜತೆ ನಟಿಸುವಾಸೆ

‘ಬ್ರಿಟಿಷ್ ಬ್ಯೂಟಿ’ ಆಮಿ ಜಾಕ್ಸನ್‌ಗೆ ನಟ ಸಲ್ಮಾನ್ ಖಾನ್ ಜತೆ ನಟಿಸುವಾಸೆ. ಈ ಬಗ್ಗೆ ಸಲ್ಲು ಮತ್ತು ಆಮಿ ಭೇಟಿಯಾದಾಗಲೆಲ್ಲಾ ಮಾತಾಡಿಕೊಳ್ಳುತ್ತಾರೆಂತೆ. ಆದರೆ, ಅದಕ್ಕಿನ್ನೂ ಕಾಲ ಕೂಡಿಬಂದಿಲ್ಲ.

ಆಮಿ ಈಗಾಗಲೇ ಭಾರತೀಯ ಚಿತ್ರಗಳಲ್ಲಿ ಅಭಿನಯಸಿದ್ದು, ಸದ್ಯಕ್ಕೆ ದಕ್ಷಿಣದ ಸೂಪರ್ ಸ್ಟಾರ್ ರಜನೀಕಾಂತ್ ಅವರ ಜತೆ ‘2.0’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ನಿರ್ಮಾಣದ ಚಿತ್ರವೊಂದರಲ್ಲೂ ಆಮಿ ನಟಿಸುತ್ತಿದ್ದಾರೆ. ಸಲ್ಮಾನ್‌ಗೆ ನಾಯಕಿಯಾಗಿ ನಟಿಸುವ ಕಾಲ ಬೇಗ ಕೂಡಿ ಬರಲಿ ಎಂಬುದು ಆ್ಯಮಿಯ ಬಯಕೆ.

ಈ ಬಗ್ಗೆ ಆಮಿ ಜತೆ ಚರ್ಚಿಸಿರುವ ಸಲ್ಲೂ ಈ ವರ್ಷದ ಅಂತ್ಯದೊಳಗೆ ಆಮಿ ಜೊತೆಗೆ ಬಣ್ಣ ಹಚ್ಚುವ ಸುಳಿವು ನೀಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry