ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡಗಳ ಕಾಳಜಿ ಮಾಡಿ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗಿಡಗಳು ಯಾವುದೇ ತೊಂದರೆಯಿಲ್ಲದೆ ಸೊಂಪಾಗಿ ಬೆಳೆದರೆ ಮನಸ್ಸಿಗೂ ನೆಮ್ಮದಿ. ಹಸಿರು, ಗಾರ್ಡೆನಿಂಗ್‌ ಬಗೆಗೆ ಒಲವಿದ್ದು ಇರುವ ಜಾಗದಲ್ಲಿಯೇ ಗಿಡಗಳನ್ನು ಚೆನ್ನಾಗಿ ಬೆಳೆಸುವ ಮನಸ್ಸಿರುವವರಿಗಾಗಿ ಕೆಲಸ ಸರಳ ಉಪಾಯಗಳು ಇಲ್ಲಿವೆ.

* ಅಕ್ಕಿ, ತರಕಾರಿ ತೊಳೆದ ನೀರು, ಮಜ್ಜಿಗೆಯನ್ನು ಹಾಕುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ.

* ಗಿಡಗಳ ಮಧ್ಯೆ ಅಲಂಕಾರಕ್ಕೆಂದು ಇಟ್ಟ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.

* ಕುಂಡದ ಮಣ್ಣನ್ನು ವರ್ಷಕ್ಕೊಮ್ಮೆಯಾದರೂ ಬದಲಾಯಿಸಿ. ಇದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ.

* ಗಿಡಗಳಿಂದ ಉದುರಿದ ಎಲೆಗಳನ್ನು ಅದೇ ಕುಂಡಕ್ಕೆ ಹಾಕುವುದರಿಂದ ಸುಲಭದಲ್ಲಿ ಗೊಬ್ಬರ ತಯಾರಿಸಬಹುದು.

* ನೀವು ನೆಡುವ ಗಿಡಗಳ ಬಗ್ಗೆ ತಿಳಿದುಕೊಳ್ಳಿ. ಹೆಚ್ಚು ಬಿಸಿಲು, ನೀರು ಬೇಡದ ಗಿಡಗಳ ಬಗ್ಗೆ ಅರಿವಿರಲಿ. ಅವುಗಳ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿ.

* ಗಿಡಗಳಲ್ಲಿ ಇರುವೆಗಳು ಹೆಚ್ಚಾದರೆ ನೀರಿನೊಂದಿಗೆ ವಿನಿಗರ್ ಸಮ ಪ್ರಮಾಣದಲ್ಲಿ ಬೆರೆಸಿ, ಇರುವೆಗಳು ಓಡಾಡುವ ಸ್ಥಳದಲ್ಲಿ ಚಿಮುಕಿಸಿ, ಇದರಿಂದ ಕಳೆಯ ಜೊತೆಗೆ ಇರುವೆಗೂ ಮುಕ್ತಿ ನೀಡಬಹುದು.

* ಕುಂಡಗಳ ಮೇಲೆ ಕಲೆಗಳು ಇದ್ದರೆ, ಬಟ್ಟೆಯನ್ನು ವಿನಿಗರ್‌ನಲ್ಲಿ ನೆನೆಸಿ ಒರೆಸುವುದರಿಂದ ಕಲೆಗಳು ಹೋಗಿ ಕುಂಡ ಹೊಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT