ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾಕ್ಕಿಂತ ಪಾಕ್‌ ಅಪಾಯಕಾರಿ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಉತ್ತರ ಕೊರಿಯಾಕ್ಕಿಂತ ಪಾಕಿಸ್ತಾನ ಅತಿ ಹೆಚ್ಚು ಅಪಾಯಕಾರಿ’ ಎಂದು ಅಮೆರಿಕದ ಮಾಜಿ ಸೆನೆಟರ್‌ ಲ್ಯಾರಿ ಪ್ರೆಸ್ಸಲೆರ್‌ ಎಚ್ಚರಿಕೆ ನೀಡಿದ್ದಾರೆ.

‘ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ದುಷ್ಟ ರಾಷ್ಟ್ರಗಳು. ಅಮೆರಿಕದ ಹಿತಾಸಕ್ತಿ ಬಗ್ಗೆ ಈ ರಾಷ್ಟ್ರಗಳಿಗೆ ಯಾವುದೇ ರೀತಿಯ ಕಾಳಜಿ ಇಲ್ಲ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ. ಇನ್ನೊಂದೆಡೆ ಉತ್ತರ ಕೊರಿಯಾ ಅಮೆರಿಕಕ್ಕೆ ಬೆದರಿಕೆವೊಡ್ಡುತ್ತಿದೆ’ ಎಂದು ತಿಳಿಸಿದ್ದಾರೆ.

‘ಪಾಕಿಸ್ತಾನದ ಅಣ್ವಸ್ತ್ರಗಳ ಮೇಲೆ ಕೇಂದ್ರಿಕೃತವಾದ ನಿಯಂತ್ರಣವಿಲ್ಲ. ಇದರಿಂದ ಅಣ್ವಸ್ತ್ರಗಳನ್ನು ಮಾರಾಟ ಅಥವಾ ಕಳ್ಳತನ ಮಾಡುವ ಸಾಧ್ಯತೆಗಳಿವೆ. ಈ ಅಣ್ವಸ್ತ್ರಗಳನ್ನು ಮಿಲಿಟರಿ ಜನರಲ್‌ ಅಥವಾ ಕರ್ನಲ್‌ ಅವರಿಂದ ಯಾರಾದರೂ ಖರೀದಿಸುವ ಸಾಧ್ಯತೆಯೂ ಇದೆ. ಪಾಕಿಸ್ತಾನದ ಅಣ್ವಸ್ತ್ರಗಳನ್ನು ಅಮೆರಿಕದ ವಿರುದ್ಧವೂ ಬಳಸುವ ಸಾಧ್ಯತೆಗಳಿವೆ. ಹೀಗಾಗಿ, ಈ ರಾಷ್ಟ್ರ ಅಪಾಯಕಾರಿಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಿ ನಿರ್ಬಂಧಗಳನ್ನು ಹೇರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಆದರೆ, ಭಾರತದ ವಿರುದ್ಧ ಅಣ್ವಸ್ತ್ರಗಳನ್ನು ಪಾಕಿಸ್ತಾನ ಬಳಸುವ ಸಾಧ್ಯತೆ ಕಡಿಮೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಸ್ತ್ರಾಸ್ತ್ರ ನಿಯಂತ್ರಣ ಉಪ ಸಮಿತಿ ಅಧ್ಯಕ್ಷರಾಗಿ ಲ್ಯಾರಿ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT