ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎನ್‌ಎ ಪರೀಕ್ಷೆಗೆ ಅತ್ಯಾಧುನಿಕ ಪ್ರಯೋಗಾಲಯಗಳ ಆವಿಷ್ಕಾರ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹೇಗ್‌(ಎಎಫ್‌ಪಿ): ಡಿಎನ್‌ಎ ಗುರುತು ಪರೀಕ್ಷೆಗಾಗಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯಗಳನ್ನು ನೆದರ್‌ಲ್ಯಾಂಡ್‌ನಲ್ಲಿ ಆರಂಭಿಸಲಾಗಿದೆ.

ಜಗತ್ತಿನಾದ್ಯಂತ ಸಂಭವಿಸುವ ವಿಪತ್ತು, ಸಂಘರ್ಷಗಳಲ್ಲಿ ಲಕ್ಷಾಂತರ ಕುಟುಂಬಗಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುತ್ತವೆ. ಡಿಎನ್‌ಎ ಪರೀಕ್ಷೆ ಮೂಲಕ ಅಂತಹವರನ್ನು ಪತ್ತೆ ಹಚ್ಚುವಲ್ಲಿ ಈ ಪ್ರಯೋಗಾಲಯಗಳು ಸಹಕಾರಿಯಾಗಲಿವೆ.

ಯುಗೊಸ್ಲಾವಿಯದಲ್ಲಿ ಉಂಟಾದ ಸಂಘರ್ಷದಿಂದಾಗಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು 1996ರಲ್ಲಿ ಸರಗೆವೊದಲ್ಲಿ ‘ನಾಪತ್ತೆಯಾದ ವ್ಯಕ್ತಿಗಳಿಗಾಗಿ ಅಂತರರಾಷ್ಟ್ರೀಯ ಆಯೋಗ’ (ಐಸಿಎಂಪಿ) ಎನ್ನುವ ಸರ್ಕಾರೇತರ ಸಂಸ್ಥೆ ಸ್ಥಾಪಿಸಿದರು. ಈ ಪ್ರಯೋಗಾಲಯಗಳು ಐಸಿಎಂಪಿ ಕೈಗೊಂಡಿರುವ ನೂತನ ಕಾರ್ಯವಾಗಿದೆ.

ಬೊಸ್ನಿಯನ್ ರಾಜಧಾನಿ ಸರಗೆವೊದಿಂದ ಐಸಿಎಂಪಿಯ ಪ್ರಯೋಗಾಲಯಗಳು ಕಳೆದ ವರ್ಷ ಹೇಗ್‌ಗೆ ಸ್ಥಳಾಂತರಗೊಂಡವು. ನಂತರ ಪ್ರಯೋಗಾಲಯಗಳಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಈ ಪ್ರಯೋಗಾಲಯಗಳ ಮೂಲಕ ಮೂಳೆಯ ಮಾದರಿ ಪರೀಕ್ಷೆಯಿಂದ ಅನುವಂಶೀಯತೆಯ ಪ್ರಮಾಣ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಡಚ್ ಕಂಪೆನಿ ಕಿಯಾಜೆನ್ ಕೊಡುಗೆ ನೀಡಿದ ಈ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ‘ದಶಕಗಳಷ್ಟು ಹಳೆಯ ಮೂಳೆ ಮಾದರಿಗಳನ್ನು ಸಹ
ಡಿಎನ್ಎ ಮೂಲಕ ಪತ್ತೆಹಚ್ಚುವಂತೆ ಶಕ್ತಗೊಳಿಸಿದ್ದಾರೆ’ ಎಂದು ಅವರು ಹೇಳಿದರು.

ಮೊಮ್ಮಕ್ಕಳು ಅಥವಾ ಇನ್ನೂ ದೂರದ ಸಂಬಂಧದ ಡಿಎನ್‌ಎ  ಮಾದರಿ ಇದ್ದರೂ ಸಹ ಈ ತಂತ್ರಜ್ಞಾನದ ಸಹಾಯದಿಂದ ಆನುವಂಶಿಕ ಗುರುತುಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.

1990ರ ದಶಕದ ಬಾಲ್ಕನ್ಸ್ ಸಂಘರ್ಷದಲ್ಲಿ ಕಾಣೆಯಾದ 40,000 ಜನರ ಪೈಕಿ ಶೇ 70ರಷ್ಟು ಜನರನ್ನು ಮತ್ತು 1995ರಲ್ಲಿ ಸ್ರೆಬ್ರೆನಿಕಾ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ 8,000 ಜನರ ಪೈಕಿ ಶೇ 90ರಷ್ಟು ಜನರನ್ನು ಗುರುತಿಸುವಲ್ಲಿ ಈ ಸಂಘಟನೆ ಈಗಾಗಲೇ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT