ಸಿದ್ಧರಾಗಿ... ಕಮಲ್ ಹಾಸನ್‌ ಮಾತನಾಡಲಿದ್ದಾರೆ...

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ತಮಿಳು ನಿಯತಕಾಲಿಕದಲ್ಲಿ ಲೇಖನ ಪ್ರಕಟ: ರಾಜಕೀಯ ಪ್ರವೇಶದ ಮತ್ತೊಂದು ಸುಳಿವು

ಸಿದ್ಧರಾಗಿ... ಕಮಲ್ ಹಾಸನ್‌ ಮಾತನಾಡಲಿದ್ದಾರೆ...

Published:
Updated:
ಸಿದ್ಧರಾಗಿ... ಕಮಲ್ ಹಾಸನ್‌ ಮಾತನಾಡಲಿದ್ದಾರೆ...

ಚೆನ್ನೈ: ‘ಸಿದ್ಧರಾಗಿ... ನವೆಂಬರ್ 7ರಂದು ತಿಳಿಸುತ್ತೇನೆ’

ಹೀಗೊಂದು ಶೀರ್ಷಿಕೆಯ ಲೇಖನ ಬರೆಯುವ ಮೂಲಕ ನಟ ಕಮಲ್ ಹಾಸನ್ ಅವರು ರಾಜಕೀಯ ಪ್ರವೇಶಿಸುವ ಕುರಿತು ಮತ್ತೊಂದು ಸುಳಿವು ನೀಡಿದ್ದಾರೆ.

ಕಮಲ್ ಅವರು ತಮಿಳಿನ ‘ಆನಂದ ವಿಕಟನ್’ ನಿಯತಕಾಲಿಕಕ್ಕೆ ಪ್ರತಿ ವಾರವೂ ಲೇಖನ ಬರೆಯುತ್ತಾರೆ. ಅದರಂತೆ ಈ ಬಾರಿ ಅವರು ಈ ಲೇಖನ ಬರೆದಿದ್ದಾರೆ.

ನವೆಂಬರ್ 7 ಕಮಲ್ ಹುಟ್ಟಿದ ದಿನ. ರಾಜಕೀಯ ಪ್ರವೇಶದ ಬಗ್ಗೆ ಅವರು ತಮ್ಮ ಹುಟ್ಟುಹಬ್ಬದ ದಿನವೇ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರವಾಗಿರುವಾಗಲೇ ಈ ಲೇಖನ ಪ್ರಕಟವಾಗಿದೆ.

‘ಯುವಪಡೆಯು ಸಂಘಟಿತವಾಗಲು ಕಾಯುತ್ತಿರುವುದನ್ನು ಗಮನಿಸಿದ್ದೇನೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ನನ್ನ ಕೆಲಸ. ಆ ಸಮಯ ಬಂದಿದೆ’ ಎಂದು ತಮ್ಮ ಲೇಖನದಲ್ಲಿ ಅವರು ಪ್ರಸ್ತಾಪಿಸಿದ್ದಾರೆ.

‘ಇದು ಯುವಜನರೊಂದಿಗೆ ಸಂವಹನ ನಡೆಸುವ ಕೆಲಸವಲ್ಲ. ಬದಲಾಗಿ ಯೋಜನೆಗಳನ್ನು ರೂಪಿಸುವ ತರಬೇತಿ ಕಾರ್ಯಾಗಾರ. ಬೆಂಬಲಿಗರನ್ನು ಒಟ್ಟುಹಾಕುವುದಷ್ಟೇ ಅಲ್ಲ, ನಾಯಕರನ್ನು ತಯಾರು ಮಾಡುವ ಕಾರ್ಯಾಗಾರ’ ಎಂದು ಅವರು ಹೇಳಿದ್ದಾರೆ.

‘18–35 ವರ್ಷದವರೆಗೆ ನನ್ನಲ್ಲಿ ರೂಪುಗೊಂಡ ಚಿಂತನೆಗಳು ಮತ್ತು ತತ್ವಗಳ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳುವ ಮೂಲಕ, ಈ ವಯೋಮಾನದವರಲ್ಲಿ ತಾವು ಇರಿಸಿರುವ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಲೋಪ ಮತ್ತು ಲೂಟಿಯ ಕುರಿತಾಗಿ ಸಾಕಷ್ಟು ಮಾತನಾಡಿದ್ದೇವೆ. ಈಗ ಶಸ್ತ್ರಚಿಕಿತ್ಸೆಯ ಸಮಯ ಬಂದಿದೆ. ಆದರೆ ಶಸ್ತ್ರಕ್ರಾಂತಿಯಿಂದ ಯಾವುದೇ ಫಲವಿಲ‌್ಲ. ಅದರಿಂದ ಜೀವಹಾನಿಯಾಗುವುದೇ ಹೆಚ್ಚು’ ಎಂದು ಅವರು ಬರೆದಿದ್ದಾರೆ.

‘ತಮಿಳುನಾಡಿಗೆ ಏನಾದರೂ ಒಳಿತು ಮಾಡುವುದು ತಾವು ಮಾಡುತ್ತಿರುವ ತ್ಯಾಗ ಎಂದುಕೊಳ್ಳದೆ ಅದೊಂದು ಕರ್ತವ್ಯ ಎಂದುಕೊಂಡವರು ನಮ್ಮೊಂದಿಗೆ ಕೈಜೋಡಿಸಿ’ ಎಂದು ಆಹ್ವಾನ ನೀಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry