ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಟ್ಜರ್ಲೆಂಡ್ ಜೋಡಿ ಮೇಲೆ ದಾಳಿ: ಮಾಹಿತಿ ಕೇಳಿದ ಸುಷ್ಮಾ

ಒಬ್ಬನ ಬಂಧನ; ಇನ್ನೂ ಮೂವರಿಗಾಗಿ ಶೋಧ
Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಫತೇಪುರ ಸಿಕ್ರಿಯಲ್ಲಿ ಸ್ವಿಟ್ಜರ್ಲೆಂಡ್‌ನ ಯುವ ಜೋಡಿಯ ಮೇಲೆ ಯುವಕರ ಗುಂಪೊಂದು ಭಾನುವಾರ ದಾಳಿ ನಡೆಸಿದೆ ಎಂಬ ವರದಿಗೆ ಸಂಬಂಧಿಸಿದಂತೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಉತ್ತರ ಪ್ರದೇಶಸರ್ಕಾರದಿಂದ ಗುರುವಾರ ಮಾಹಿತಿ ಕೇಳಿದ್ದಾರೆ.

‘ಈಗಷ್ಟೇ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ನಮ್ಮ ಕಚೇರಿಯ ಅಧಿಕಾರಿಗಳು ಈ ಜೋಡಿಯನ್ನು ಸಂಪರ್ಕಿಸಲಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಜೋಡಿಯನ್ನು ಅಟ್ಟಿಸಿಕೊಂಡು ಹೋದ ಗುಂಪು ಅವರಿಗೆ ಕಲ್ಲು ಮತ್ತು ಕೋಲಿನಿಂದ ಹೊಡೆದಿದೆ. ಇಬ್ಬರಿಗೂ ಗಾಯಗಳಾಗಿ ನೆಲದ ಮೇಲೆ ಬಿದ್ದಿದ್ದಾರೆ. ಅಲ್ಲಿದ್ದ ಜನರು ಮೊಬೈಲ್‌ಗಳಲ್ಲಿ ಇವರ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ’ ಎಂದು ವರದಿಗಳು ತಿಳಿಸಿವೆ.

ಸ್ವಿಟ್ಜರ್ಲೆಂಡಿನ ಲೌಸನ್ನೆ ಪ್ರದೇಶದ ಕ್ವಿಂಟಿನ್ ಜೆರ್ಮಿ ಕ್ಲರ್ಕ್ (24) ಹಾಗೂ ಮೇರಿ ಡ್ರೊಜ್ (24) ಆಗ್ರಾದಲ್ಲಿ ಒಂದು ದಿನ ಕಳೆದಿದ್ದಾರೆ. ಮರುದಿನ ಫತೇಪುರ ಸಿಕ್ರಿಯ ರೈಲು ನಿಲ್ದಾಣದ ಬಳಿ ಸುತ್ತಾಡುತ್ತಿದ್ದರು.

ಖಂಡನೆ: ಸ್ವಿಟ್ಜರ್ಲೆಂಡ್ ಜೋಡಿಯ ಮೇಲೆ ನಡೆದ ದಾಳಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಖಂಡಿಸಿದ್ದಾರೆ. ‘ಈ ಘಟನೆ ದುರದೃಷ್ಟ
ಕರ. ಇದು ಭಾರತೀಯರಿಗೆ ಮುಜುಗರ ತರುವ ಸಂಗತಿ’ ಎಂದು ಅವರು ಹೇಳಿದ್ದಾರೆ.

ಚೇತರಿಕೆ: ‘ದಾಳಿಗೊಳಗಾದ ಯುವ ಜೋಡಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.

**

ಮೂವರ ಬಂಧನ

ಲಖನೌ: ‘ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಯನ್ನು ಬಂಧಿಸಲಾಗಿದ್ದು ಇನ್ನೂ ಇಬ್ಬರಿಗಾಗಿ ಶೋಧ ನಡೆದಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT