‘ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ನೀತಿ’ಗೆ ಸಂಪುಟ ಅಸ್ತು

ಸೋಮವಾರ, ಮೇ 27, 2019
24 °C

‘ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ನೀತಿ’ಗೆ ಸಂಪುಟ ಅಸ್ತು

Published:
Updated:
‘ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ನೀತಿ’ಗೆ ಸಂಪುಟ ಅಸ್ತು

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರೂಪಿಸಿದ ‘ಲಿಂಗತ್ವ ಅಲ್ಪಸಂಖ್ಯಾತರ  ನೀತಿ’ಗೆ ಸಚಿವ ಸಂ‍ಪುಟ ಗುರುವಾರ ಒಪ್ಪಿಗೆ ನೀಡಿದೆ.

‘ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಪುರುಷ, ಮಹಿಳೆ ಅಥವಾ ತೃತೀಯ ಲಿಂಗವಾಗಿ ಗುರುತಿಸಿಕೊಳ್ಳುವ ಸಂಬಂಧ 2014 ಏ. 15ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ಈ ನೀತಿ ರೂಪಿಸಲಾಗಿದೆ’ ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

‘ಜೋಗಪ್ಪಂದಿರು, ಮಹಿಳೆಯಿಂದ ಪುರುಷನಾಗಿ,  ಪುರುಷನಿಂದ ಮಹಿಳೆಯಾಗಿ ಲಿಂಗ ಪರಿವರ್ತನೆ ಆಗುವ ಲೈಂಗಿಕ ಅಲ್ಪಸಂಖ್ಯಾತರು, ಅಂತರ್ಲಿಂಗ ಸಮುದಾಯ, ಕೋಥಿ ಮತ್ತು ಜೋಗ್ತಾಸ್‌, ಶಿವಶಕ್ತಿಗಳು ಮತ್ತು ಅವರ್ದೀಗಳು ಲಿಂಗತ್ವ ಅಲ್ಪಸಂಖ್ಯಾತ ವರ್ಗದಲ್ಲಿ ಗುರುತಿಸಿಕೊಳ್ಳುತ್ತಾರೆ. ಈ ನೀತಿಯಿಂದ ಈ ವರ್ಗದವರಿಗೆ ಕಾನೂನಿನ ಅಂಗೀಕಾರ ಸಿಗಲಿದ್ದು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ಪರಿಗಣಿಸಿ ಶಿಕ್ಷಣ ಮತ್ತು ಸರ್ಕಾರಿ ನೇಮಕಾತಿಗಳ ಸಂದರ್ಭದಲ್ಲಿ ಮೀಸಲಾತಿ ಕಲ್ಪಿಸಲು ಈ ನೀತಿ ಅವಕಾಶ ಕಲ್ಪಿಸಲಿದೆ’ ಎಂದು ಅವರು ವಿವರಿಸಿದರು.

‘ಭಯ, ಅವಮಾನ, ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ ಮತ್ತಿತರ ಸಮಸ್ಯೆಗಳಿಂದ ಲಿಂಗತ್ವ ಅಲ್ಪಸಂಖ್ಯಾತರನ್ನು ಹೊರತರಲು ಮತ್ತು ಈ ವರ್ಗದವರಿಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಲು ಈ ನೀತಿಯಡಿ ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಜಯಚಂದ್ರ ವಿವರಿಸಿದರು.

ಮುಖ್ಯ ಅಂಶಗಳು

* ಎಲ್ಲ ನಮೂನೆ, ಅರ್ಜಿಗಳಲ್ಲಿ ಲಿಂಗ ಆಯ್ಕೆಯಲ್ಲಿ ‘ಗಂಡು, ಹೆಣ್ಣು, ಲಿಂಗತ್ವ ಅಲ್ಪಸಂಖ್ಯಾತರು’ ಎಂದು ಕಡ್ಡಾಯಗೊಳಿಸುವುದು

* ಭಿಕ್ಷಾಟನೆ ಹೋಗಲಾಡಿಸಿ, ಪುನವರ್ಸತಿ ಯೋಜನೆ ಕಲ್ಪಿಸುವುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry