ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆಗೆ ಎಂಜಿನ್‌ ಹಸ್ತಾಂತರ

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ‘ಸುಖೋಯ್‌ 30 ಎಂಕೆಐ’ ಯುದ್ಧ ವಿಮಾನದ ಎಂಜಿನ್‌ ತಯಾರಿಕಾ ವಿಭಾಗ ಸಿದ್ಧಪಡಿಸಿರುವ 50 ನೇ ಎಎಲ್‌31ಎಫ್‌ಪಿ ಎಂಜಿನ್‌ ಅನ್ನು ಭಾರತೀಯ ವಾಯು ಪಡೆಗೆ ಹಸ್ತಾಂತರಿಸಿದೆ.

‘ ಭಾರತ ಮತ್ತು ರಷ್ಯಾದ 70 ನೇ ವರ್ಷದ ರಾಜತಾಂತ್ರಿಕ ಬಾಂಧವ್ಯದ ನೆನಪಿಗಾಗಿ ಈ ಎಂಜಿನ್‌ನ ಹಸ್ತಾಂತರ ಆಗಿದೆ. ಎಂಜಿನ್‌ಗೆ ಅಗತ್ಯವಿರುವ ಎಲ್ಲ ಬಿಡಿಭಾಗಗಳನ್ನು ಎಚ್‌ಎಎಲ್‌ನಲ್ಲೇ ತಯಾರಿಸಲಾಗಿದೆ. ಎಎಲ್‌31ಎಫ್‌ಪಿ ಎಂಜಿನ್‌ ಅನ್ನು ಸುಖೋಯ್‌ 30 ಎಂಕೆಐಗೆ ಬಳಸಲಾಗುತ್ತಿದೆ’ ಎಂದು ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಟಿ.ಸುವರ್ಣರಾಜು ತಿಳಿಸಿದ್ದಾರೆ.

ಎಂಜಿನ್‌ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸುವರ್ಣರಾಜು ಅವರು ಏರ್‌ ಮಾರ್ಷಲ್‌ ಎಸ್‌.ಬಿ.ದೇವ್ ಅವರಿಗೆ ಹಸ್ತಾಂತರಿಸಿದರು. ಒಡಿಶಾದ ಕೋರಪುಟ್‌ನಲ್ಲಿ ಎಚ್‌ಎಎಲ್‌ನ ಎಂಜಿನ್‌ ತಯಾರಿಕಾ ವಿಭಾಗವಿದೆ. ಇಲ್ಲಿಯವರೆಗೆ ಒಟ್ಟು 357 ಎಂಜಿನ್‌ಗಳನ್ನು ತಯಾರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT