ಮಂಗಳವಾರ, ಸೆಪ್ಟೆಂಬರ್ 17, 2019
24 °C

48 ಗಂಟೆಗಳಲ್ಲಿ ನಗರದಲ್ಲಿ ಮಳೆ?

Published:
Updated:
48 ಗಂಟೆಗಳಲ್ಲಿ ನಗರದಲ್ಲಿ ಮಳೆ?

ಬೆಂಗಳೂರು: ‘ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ತುಂತುರು ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಬುಧವಾರ ನೈರುತ್ಯ ಮುಂಗಾರು ದೇಶದಿಂದ ನಿರ್ಗಮಿಸಿದೆ. ಹಿಂಗಾರು ಮಳೆ ಪ್ರವೇಶಕ್ಕೂ ಮುನ್ನ, ಪರಿವರ್ತನಾ ಅವಧಿಯಲ್ಲಿ ಸಾಮಾನ್ಯವಾಗಿ ಸಣ್ಣ ಪ್ರಮಾಣದ ಮಳೆಯಾಗುತ್ತದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದರು.

‘ನಗರದಲ್ಲಿ ಕೋರಮಂಗಲ, ಯಶವಂತಪುರ, ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ಇದೆ’ ಎಂದರು.

‘ಶುಕ್ರವಾರ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

Post Comments (+)