ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಕಜಕಸ್ತಾನ ಸವಾಲು

Last Updated 26 ಅಕ್ಟೋಬರ್ 2017, 19:50 IST
ಅಕ್ಷರ ಗಾತ್ರ

ಬೆಂಗಳೂರು: ಫಿಬಾ 16 ವರ್ಷ ದೊಳಗಿನ ಬಾಲಕಿಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕಸಕಸ್ತಾನ ತಂಡವನ್ನು ಎದುರಿಸಲಿದೆ. ಶುಕ್ರವಾರ ರಾತ್ರಿ ಎಂಟು ಗಂಟೆಗೆ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಗುರುವಾರ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು 59–54ರಿಂದ ಮಣಿಸಿ ಕಜಕಸ್ತಾನ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು. ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದಿರುವ ಭಾರತ ಬಿ ವಿಭಾಗದ ‘ಎ’ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು.

ರೋಚಕ ಪಂದ್ಯದಲ್ಲಿ ಕಜಕಸ್ತಾನಕ್ಕೆ ಶ್ರೀಲಂಕಾ ಪ್ರಬಲ ಪೈಪೋಟಿ ಒಡ್ಡಿತು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಸಮಬಲದ ಹೋರಾಟ ಕಂಡು ಬಂತು. ಮೊದಲ ಕ್ವಾರ್ಟರ್‌ನಲ್ಲಿ 17–13ರಿಂದ ಮುನ್ನಡೆ ಸಾಧಿಸಿದ ಶ್ರೀಲಂಕಾ ನಂತರ ಸ್ವಲ್ಪ ಹಿನ್ನಡೆ ಅನುಭವಿಸಿತು. ಹೀಗಾಗಿ ಕಜಕಸ್ತಾನ 22–19ರಿಂದ ಮುನ್ನಡೆಯಿತು.

ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಕಜಕಸ್ತಾನ ಎದುರಾಳಿ ತಂಡವನ್ನು ದಂಗುಬಡಿಸಿತು. ಈ ಹಂತದಲ್ಲಿ 18 ಪಾಯಿಂಟ್ ಸಂಗ್ರಹಿಸಿದ ತಂದ ಶ್ರೀಲಂಕಾಗೆ ಬಿಟ್ಟುಕೊಟ್ಟದ್ದು ಎಂಟು ಪಾಯಿಂಟ್ ಮಾತ್ರ. ಕೊನೆಯ ಕ್ವಾರ್ಟರ್‌ನಲ್ಲಿ ಪಾಯಿಂಟ್ ಗಳಿಸಲು ಎರಡೂ ತಂಡದ ಆಟಗಾರರು ಜಿದ್ದಿಗೆ ಬಿದ್ದರು. ರಕ್ಷಣೆಗೆ ಹೆಚ್ಚು ಒತ್ತು ಕೊಟ್ಟರು. ಹೀಗಾಗಿ ಒಟ್ಟು 15 ಪಾಯಿಂಟ್‌ಗಳು ಮಾತ್ರ ಬಂದವು.

ಇವುಗಳಲ್ಲಿ ಒಂಬತ್ತನ್ನು ಶ್ರೀಲಂಕಾ ತನ್ನದಾಗಿಸಿಕೊಂಡಿತು. ಹೀಗಾಗಿ ಕೂದಲೆಳೆ ಅಂತರದಲ್ಲಿ ತಂಡ ಸೋಲೊಪ್ಪಿಕೊಂಡಿತು.

ಕಜಕಸ್ತಾನದ ಪರ ಎ.ಕೊಮರೋವ 17 ಪಾಯಿಂಟ್ ಕಲೆ ಹಾಕಿ ಮಿಂಚಿದರು. 10 ರೀಬೌಂಡ್‌ಗಳನ್ನು ಮಾಡಿದ ಯು ಉಸೇನ್‌ ಅವರು ಕೊಮರೋವ ಅವರಿಗೆ ಉತ್ತಮ ಬೆಂಬಲ ನೀಡಿದರು. ಶ್ರೀಲಂಕಾ ಪರ ಹಿನಿಂದುಮಾ ಕಪುಗ 15 ಪಾಯಿಂಟ್ ಗಳಿಸಿದರು.

ಸೆಮಿಫೈನಲ್ ಪಂದ್ಯ: ರಾತ್ರಿ 8ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT