ಮೊಗ್ಗಿನ ಜಡೆಗೆ ರದ್ದಾದ ಮದುವೆ

ಬುಧವಾರ, ಜೂನ್ 26, 2019
27 °C

ಮೊಗ್ಗಿನ ಜಡೆಗೆ ರದ್ದಾದ ಮದುವೆ

Published:
Updated:
ಮೊಗ್ಗಿನ ಜಡೆಗೆ ರದ್ದಾದ ಮದುವೆ

ಹೊಸಕೋಟೆ: ತಾಲ್ಲೂಕಿನ ಭೀಮಕ್ಕನಹಳ್ಳಿಯಲ್ಲಿ ವಧುವಿಗೆ ಮೊಗ್ಗಿನ ಜಡೆ ಕೊಡಲಿಲ್ಲ ಎಂಬ ಕಾರಣಕ್ಕೆ ವಧು ಹಾಗೂ ವರನ ಸಂಬಂಧಿಕರ ನಡುವೆ ಜಗಳವಾಗಿ, ಮದುವೆಯೇ ರದ್ದಾಗಿದೆ.

‘ವಿಜಯಪುರದ ವಧು ಹಾಗೂ ಭೀಮಾಪುರ ಗ್ರಾಮದ ವರನ ಜತೆ ಮದುವೆ ನಿಶ್ಚಯವಾಗಿತ್ತು. ಬುಧವಾರ ಸಂಜೆ ಮದುವೆಯ ಆರತಕ್ಷತೆ ನಡೆದಿತ್ತು. ಗುರುವಾರ ಬೆಳಿಗ್ಗೆ ಕಲ್ಯಾಣಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಅಲ್ಲಿ ಜಡೆಗಾಗಿ ಜಗಳ ನಡೆದಿದ್ದರಿಂದ, ವಧುವಿನ ಕಡೆಯವರೇ ಮಂಟಪದಿಂದ ಹೊರಟು ಹೋದರು’ ಎಂದು ಸಂಬಂಧಿಯೊಬ್ಬರು ತಿಳಿಸಿದರು.

‘ಸಂಪ್ರದಾಯದ ಪ್ರಕಾರ ವರನ ಕಡೆಯವರು ವಧುವಿಗೆ ಮಲ್ಲಿಗೆ ಹೂವಿನ ಮೊಗ್ಗಿನ ಜಡೆ ಕೊಡಬೇಕಿತ್ತು. ಆದರೆ, ವರದ ಕಡೆಯವರು  ಕನಕಾಂಬರ ಹೂವಿನ ಜಡೆ ನೀಡಿದ್ದರು. ಅಷ್ಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಧುವಿನ ಕಡೆಯವರು, ಜಗಳ ಮಾಡಲು ಆರಂಭಿಸಿದ್ದರು.’

‘ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದು, ಮಂಟಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕ್ಷಮೆ ಕೋರಿದ್ದ ವರನ ಸಂಬಂಧಿಕರು, ವಧುವಿನ ಸಂಬಂಧಿಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಅದಕ್ಕೆ ಒಪ್ಪದ ವಧುವಿನ ಕಡೆಯವರೆಲ್ಲ ಮದುವೆಯನ್ನು ರದ್ದುಪಡಿಸಿ ವಧುವಿನ ಸಮೇತ ಮಂಟಪದಿಂದ ಹೊರಹೋದರು’ ಎಂದು ಸಂಬಂಧಿ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry