ಬಾಕ್ಸಿಂಗ್‌: ಮನೋಜ್‌, ಮನದೀಪ್‌ಗೆ ಗೆಲುವು

ಬುಧವಾರ, ಜೂನ್ 26, 2019
26 °C

ಬಾಕ್ಸಿಂಗ್‌: ಮನೋಜ್‌, ಮನದೀಪ್‌ಗೆ ಗೆಲುವು

Published:
Updated:

ವಿಶಾಖಪಟ್ಟಣ: ಮನೋಜ್‌ ಕುಮಾರ್‌ ಮತ್ತು ಮನದೀಪ್‌ ಜಾಂಗ್ರಾ ಅವರು ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಸಿಹಿ ಸವಿದಿದ್ದಾರೆ. ಗುರುವಾರ ನಡೆದ 69 ಕೆ.ಜಿ. ವಿಭಾಗದ ವೆಲ್ಟರ್‌ವೇಟ್‌ ಸ್ಪರ್ಧೆಯ ಮೊದಲ ಸುತ್ತಿನ ಹೋರಾ ಟದಲ್ಲಿ ಆರ್‌ಎಸ್‌ಪಿಬಿಯನ್ನು ಪ್ರತಿನಿಧಿಸಿದ್ದ ಮನೋಜ್‌, ಉತ್ತರ ಪ್ರದೇಶದ ರಾಹುಲ್‌ ಗುಪ್ತಾ ಅವರನ್ನು ಮಣಿಸಿದರು. 75 ಕೆ.ಜಿ. ವಿಭಾ ಗದ ಮಿಡಲ್‌ವೇಟ್‌ ಸ್ಪರ್ಧೆಯಲ್ಲಿ ಹೋರಾಡಿದ ಮನದೀಪ್‌, ತಮಿಳು ನಾಡಿನ ಆರ್‌.ಪಿ. ಪ್ರಕಾಶ್‌ ಅವರನ್ನು ಸೋಲಿಸಿದರು. 64 ಕೆ.ಜಿ. ಲೈಟ್‌ ವೆಲ್ಟರ್‌ವೇಟ್‌ ವಿಭಾಗದಲ್ಲಿ ಕಣದಲ್ಲಿದ್ದ ರೋಹಿತ್‌ ಟೋಕಾಸ್‌, ತ್ರಿಪುರದ ವಿಷ್ಣು ವಿರುದ್ಧ ಗೆದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry