‘ಟಿಪ್ಪು ಜಯಂತಿ ಆಚರಣೆ ಶತಸಿದ್ಧ: ಸಾಧ್ಯವಿದ್ದರೆ ತಡೆಯಿರಿ’

ಬುಧವಾರ, ಜೂನ್ 19, 2019
32 °C

‘ಟಿಪ್ಪು ಜಯಂತಿ ಆಚರಣೆ ಶತಸಿದ್ಧ: ಸಾಧ್ಯವಿದ್ದರೆ ತಡೆಯಿರಿ’

Published:
Updated:
‘ಟಿಪ್ಪು ಜಯಂತಿ ಆಚರಣೆ ಶತಸಿದ್ಧ: ಸಾಧ್ಯವಿದ್ದರೆ ತಡೆಯಿರಿ’

ಬೆಂಗಳೂರು: ‘ಬಹುಜನ ಅಂಬೇಡ್ಕರ್ ಸಂಘದ ವತಿಯಿಂದ ಕೆ.ಆರ್. ಪುರ ಕ್ಷೇತ್ರದ ಇಸ್ಲಾಂಪುರದಲ್ಲಿ ಟಿಪ್ಪುಜಯಂತಿಯನ್ನು ನವೆಂಬರ್ 10ರಂದು ವಿಜೃಂಭಣೆಯಿಂದ ಆಚರಿಸುತ್ತೇವೆ. ಸಾಧ್ಯವಿದ್ದರೆ, ಬಿಜೆಪಿ ಸಂಸದರು ಅಲ್ಲಿಗೆ ಬಂದು ತಡೆಯಲಿ’ ಎಂದು ಸಂಘದ ಅಧ್ಯಕ್ಷೆ ಎನ್.ಸಿ. ಜ್ಯೋತಿ ಸವಾಲು ಹಾಕಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಪ್ಪು ಜಯಂತಿ ಹೆಸರಿನಲ್ಲಿ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ, ಸಂಸದರಾದ ಪ್ರತಾಪ್‌ ಸಿಂಹ ಮತ್ತು ಶೋಭಾ ಕರಂದ್ಲಾಜೆ ಅವರು ಸಮಾಜದಲ್ಲಿ ಶಾಂತಿ ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದರು.

‘ಕೆಲ ಬಿಜೆಪಿ ನಾಯಕರು ದೇಶದಲ್ಲಿನ 35 ಕೋಟಿ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಟಿಪ್ಪುವಿನ ಇತಿಹಾಸ ತಿಳಿಯದ ಅವರು ಚುನಾವಣಾ ರಾಜಕೀಯದಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry