ವಿಜೃಂಭಣೆಯ ಘಟ್ಟಗಿ ಬಸವೇಶ್ವರ ಜಾತ್ರೆ

ಬುಧವಾರ, ಜೂನ್ 26, 2019
28 °C

ವಿಜೃಂಭಣೆಯ ಘಟ್ಟಗಿ ಬಸವೇಶ್ವರ ಜಾತ್ರೆ

Published:
Updated:
ವಿಜೃಂಭಣೆಯ ಘಟ್ಟಗಿ ಬಸವೇಶ್ವರ ಜಾತ್ರೆ

ರಬಕವಿ ಬನಹಟ್ಟಿ: ಸ್ಥಳೀಯ ಘಟ್ಟಗಿ ಬಸವೇಶ್ವರರ ಜಾತ್ರೆಯು ದೀಪಾವಳಿ ಕಡೆಪಾಡ್ಯೆ ದಿನವಾದ ಬುಧವಾರ ನಡೆಯಿತು. ಸಂಜೆ ರಥೋತ್ಸವದ ಸಂದರ್ಭದಲ್ಲಿ ಭಕ್ತರು ಸಾವಿರಾರು ರೂಪಾಯಿ ಮೊತ್ತದ ಮದ್ದು ಸುಡುವುದರ ಮೂಲಕ ತಮ್ಮ ಹರಕೆ ಪೂರೈಸಿದರು.

ರಥೋತ್ಸವವು ದೇವಸ್ಥಾನದಿಂದ ಆರಂಭವಾಗಿ ಹೊಸಪೇಟೆ ಲೇನ್‌, ಈಶ್ವರ ಸಣಕಲ್‌ ರಸ್ತೆ ಮೂಲಕ ಹಾಯ್ದು ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಬಂದು ನಿಂತಿತು. ಅಲ್ಲಿ ಭಕ್ತರು ದರ್ಶನ ಪಡೆದ ನಂತರ ಮತ್ತೆ ದೇವಸ್ಥಾನಕ್ಕೆ ಮರಳಿತು.

ಈ ಸಂದರ್ಭದಲ್ಲಿ ಮುತ್ತೈದೆಯರು ರಥಕ್ಕೆ ಆರತಿ ಮಾಡಿದರು. ರಥಕ್ಕೆ ಉತ್ತತ್ತಿಗಳನ್ನು ಎಸೆದರು. ಕರಡಿ ವಾದನ ಮತ್ತ ಕೈ ದಪ್ಪಿನ ತಂಡದವರ ಪ್ರದರ್ಶನ ಗಮನ ಸೆಳೆಯಿತು. ಜಾತ್ರೆಯ ನಿಮಿತ್ತವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ಮುತ್ತೈದೆಯರಿಗೆ ಉಡಿ ತುಂಬುವ ಜೊತೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಲ್ಲಿಕಾರ್ಜುನ ನಾಶಿ, ಶಿವಾನಂದ ಬಾಗಲಕೋಟಮಠ, ಚಿದಾನಂದ ಸೊಲ್ಲಾಪೂರ, ಸುರೇಶ ಗೊಳಸಂಗಿ, ಬಸವರಾಜ ಮಟ್ಟಿಕಲ್ಲಿ, ಬಸವರಾಜ ಜವಾರಿ, ಬಸವರಾಜ ತೆಗ್ಗಿ, ಈರಣ್ಣ ಗುಣಕಿ, ಈಶ್ವರ ನಾಗರಾಳ, ರವಿ ಶಿರಗಾರ, ಬಾಲಚಂದ್ರ ಉಮದಿ, ಬಸವರಾಜ ಭಿಲವಡಿ, ಸಂಜಯ ತೆಗ್ಗಿ, ಬಸವರಾಜ ಜುವಾರಿ, ನೀಲಕಂಠ ಮುತ್ತೂರ, ಗಣಪತರಾವ ಹಜಾರೆ, ಪ್ರವೀಣ ಹಜರೆ, ರವಿ ಮುರಗೋಡ, ಶ್ರೀಶೈಲ ಭಿಲವಡಿ, ವಿನಾಯಕ ಶೇಗುಣಸಿ, ವಿಜಯ ನಾಶಿ, ಉದಯ ಜಿಗಜಿನ್ನಿ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry