ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಆಸ್ಪತ್ರೆಗೆ ಕಾಯಕಲ್ಪ

Last Updated 27 ಅಕ್ಟೋಬರ್ 2017, 8:35 IST
ಅಕ್ಷರ ಗಾತ್ರ

ನಾಗಮಂಗಲ: ಜನರ ಬಳಕೆಗೆ ವ್ಯವಸ್ಥಿತವಾಗಿ ಇರಬೇಕಾದ ಸಾರ್ವಜನಿಕ ಅಸ್ಪತ್ರೆಗೆ ಕಾಯಕ್ಪ ನೀಡಲಾಗುತ್ತಿದೆ. ಪಟ್ಟಣದ ಹೃದಯ ಭಾಗದಲ್ಲಿ 100 ಹಾಸಿಗೆಗಳ ಸಾರ್ವಜನಿಕ ಅಸ್ಪತ್ರೆ ನುರಿತ ವೈದ್ಯರಿದ್ದು, ಅಶುಚಿತ್ವದಿಂದ ಕೂಡಿದ ಶೌಚಾಲಯ, ಪಾಚಿಗಟ್ಟಿದ್ದ ಗೋಡೆಗಳಿಂದ ಕಳೆಗುಂದಿತ್ತು.

ಈ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತ ಇಲಾಖೆ ₹ 50 ಲಕ್ಷದ ಅಂದಾಜು ಮೊತ್ತದಲ್ಲಿ ಶೌಚಾಲಯವನ್ನು ಸರಿ ಪಡಿಸುವ ಜತೆಗೆ ಪಾಚಿಗಟ್ಟಿದ್ದ ಗೋಡೆಗಳ ಪ್ಲಾಸ್ಟಿಂಗ್ ತೆಗೆದು, ಸಿಮೆಂಟ್ ಪ್ಲಾಸ್ಟಿಂಗ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸುಸುಜ್ಜಿತವಾದ ನಾಲ್ಕು ಹಾಸಿಗೆಗಳ ಐಸಿಯು ಯಂತ್ರಗಳನ್ನು ಅಳವಡಿಸುವ ಕಾಮಗಾರಿ ಅಂತಿಮ ಹಂತದಲ್ಲಿದೆ. ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವ ಕೆಲಸ ಇನ್ನು ಪ್ರಾರಂಭವಾಗಬೇಕಿದೆ. 30 ಮಂದಿ ಶುಶ್ರೂಷಕಿಯರು ಇರಬೇಕಾದ ಕಡೆ ಎಂಟು ಜನರಿದ್ದು, ತಾತ್ಕಾಲಿಕ ನಿಯೋಜನೆ ಮೇಲೆ ಕೆಲವರು ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT