ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಸಮಾನತೆ ವಿರುದ್ಧ ಧ್ವನಿಯೆತ್ತಿದ ಶರಣರು’

Last Updated 27 ಅಕ್ಟೋಬರ್ 2017, 9:45 IST
ಅಕ್ಷರ ಗಾತ್ರ

ಶಹಾಪುರ:‘ಬಸವಾದಿ ಶರಣರು ಅಸಮಾನತೆಯ ವಿರುದ್ಧ ಬಂಡೆದ್ದು ಶರಣ ಸಮೂಹದ ಚಳವಳಿ ಕಟ್ಟಿದರು’ ಎಂದು ಚಿಂತಕ ಪ್ರೊ.ಆರ್‌.ಕೆ. ಹುಡುಗಿ ಹೇಳಿದರು. ಇಲ್ಲಿನ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವ ಬೆಳಕು–68 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಆತ್ಮವನ್ನು ಮನುವಾದಿಗಳು ಹಾಳು ಮಾಡಿದ್ದಷ್ಟು ಬೇರೆ ಯಾರು ಮಾಡಿಲ್ಲ. ಮೋಸ. ಮೌಢ್ಯ ಬಿತ್ತನೆ ಮಾಡಿ ಮಾನಸಿಕ ರೋಗಿಗಳನ್ನು ಸೃಷ್ಟಿ ಮಾಡಿದರು. ಪಂಚಾಚಾರ್ಯರು ಲಿಂಗಾಯತವನ್ನು ಒಪ್ಪಿಕೊಂಡರೆ ನಾವೆಲ್ಲರೂ ಸ್ವಾಗತಿಸುತ್ತೇವೆ. ಸಮಾನತೆ ಸಾರುವ ವಚನ ಸಾಹಿತ್ಯ ಧರ್ಮ ಗ್ರಂಥವೆಂದು ಸ್ವೀಕರಿಸಬೇಕು’ ಎಂದು ಸಲಹೆ ಮಾಡಿದರು.

‘ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಅರಿವಿನ ಬೆಳಕನ್ನು ವಿಸ್ತರಿಸಿಕೊಳ್ಳುವಂತೆ’ ಹೇಳಿದರು. ಪ್ರತಿಷ್ಠಾನದ ಸಂಚಾಲಕ ವಿಶ್ವಾರಾಧ್ಯ ಸತ್ಯಂಪೇಟೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಲಿಂ ಸಂಗ್ರಾಮ, ಎಂಜಿನಿಯರ್ ಶಾಂತಪ್ಪ ಪೂಜಾರಿ, ಅಲ್ಲಮಪ್ರಭು, ಸುಮಿತ್ರ ಸಗರ್, ಚಂದ್ರಶೇಖರ ಗೋಗಿ, ಸಿದ್ದಲಿಂಗಪ್ಪ ಆನೇಗುಂದಿ, ಶಿವಣ್ಣ ಇಜೇರಿ, ಸಿದ್ರಾಮ ಹೊನ್ಕಲ್, ಡಾ.ಅಬ್ದುಲ ಕರೀಂ ಕನ್ಯಾಕೊಳ್ಳೂರ, ಗುಂಡಪ್ಪ ತುಂಬಿಗಿ, ರಾಜು ಕುಂಬಾರ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT