ದೇವರ ಮೆರವಣಿಗೆಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುವ ವಿಮಾನ ನಿಲ್ದಾಣ!

ಭಾನುವಾರ, ಮೇ 19, 2019
33 °C

ದೇವರ ಮೆರವಣಿಗೆಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುವ ವಿಮಾನ ನಿಲ್ದಾಣ!

Published:
Updated:
ದೇವರ ಮೆರವಣಿಗೆಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುವ ವಿಮಾನ ನಿಲ್ದಾಣ!

ತಿರುವನಂತಪುರ: ದೇವರ ಮೆರವಣಿಗೆ ಸಾಗಲು ದಾರಿ ಮಾಡಿಕೊಡುವ ಉದ್ದೇಶದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವು ರನ್‌ವೇ ಕಾರ್ಯನಿರ್ವಹಣೆಯನ್ನೇ ಸ್ಥಗಿತಗೊಳಿಸುವುದನ್ನು ಎಲ್ಲಾದರೂ ಕೇಳಿದ್ದೀರಾ?

ಬಹುಶಃ ವಿಶ್ವದಲ್ಲೇ ಇಂಥದ್ದೊಂದು ಕ್ರಮ ಅನುಸರಿಸುತ್ತಿರುವ ಮೊದಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿರಬೇಕು ತಿರುವನಂತಪುರದ ವಿಮಾನ ನಿಲ್ದಾಣ. ಇಲ್ಲಿ ವರ್ಷದಲ್ಲಿ ಎರಡು ಬಾರಿ ದೇವರ ಮೆರವಣಿಗೆಗೆಂದು ಐದು ಗಂಟೆಗಳ ಕಾಲ ರನ್‌ವೇ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಾಗುತ್ತದೆ.

ಇಲ್ಲಿನ ಅನಂತಪದ್ಮನಾಭ ದೇಗುಲದಲ್ಲಿ ನಡೆಯುವ 10 ದಿನಗಳ ಜಾತ್ರೆಯ ಕೊನೆಯ ದಿನ ರನ್‌ವೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತದೆ. ಆ ದಿನ ‘ಆರಾಟ್ಟು’ ಮಹೋತ್ಸವ (ದೇಗುಲದ ವಿಗ್ರಹಗಳ ಧಾರ್ಮಿಕ ಸ್ನಾನ ಕಾರ್ಯಕ್ರಮ) ನಡೆಯುತ್ತದೆ. ಇದಕ್ಕಾಗಿ ವಿಗ್ರಹಗಳನ್ನು ಶಾನ್‌ಗುಮುಘಮ್ ಬೀಚ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಅರ್ಚಕರು, ತಿರುವಾಂಕೂರು ರಾಜಮನೆತನದವರು, ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ವಿಮಾನ ನಿಲ್ದಾಣದ ರನ್‌ವೇ ಮೂಲಕ ಹಾದುಹೋಗುತ್ತದೆ.

ರನ್‌ವೇ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಒಂದು ವಾರ ಮೊದಲೇ ವಿಮಾನ ನಿಲ್ದಾಣದ ಆಡಳಿತವು ನೋಟಮ್ (ನೊಟೀಸ್ ಟು ಆ್ಯರ್‌ಮೆನ್) ಎಂಬ ನೋಟಿಸ್‌ ಹೊರಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಸಂಜೆ 4 ಗಂಟೆಗೆ ಕಡಲ ಕಿನಾರೆಗೆ ಸಾಗುವ ಮೆರವಣಿಗೆ ರಾತ್ರಿ 9 ಗಂಟೆಗೆ ‘ದೀವಟಿಕೆ’ಯೊಂದಿಗೆ ವಾಪಸಾಗುತ್ತದೆ. ನಂತರ ರನ್‌ವೇಯನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಲಾಗುತ್ತದೆ.

ಅನಂತಪದ್ಮನಾಭ ದೇಗುಲದ ಆಡಳಿತ ಮಂಡಳಿಯವರು ಹೇಳುವ ಪ್ರಕಾರ, ರನ್‌ವೇ ಇರುವ ಪ್ರದೇಶವು ಶತಮಾನಗಳಿಂದ ‘ಆರಾಟ್ಟು’ ಮೆರವಣಿಗೆಯ ಹಾದಿಯಾಗಿದೆ. 1932ರಲ್ಲಿ ಆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿತ್ತು. ಆದರೆ, ಅದಕ್ಕೂ ಮೊದಲೇ ಆ ಜಾಗದಲ್ಲಿ ಮೆರವಣಿಗೆ ಸಾಗುತ್ತಿತ್ತು.

‘ಆರಾಟ್ಟು’ಉತ್ಸವದಲ್ಲಿ ಭಾಗಿಯಾಗುವವರಿಗೆ ವಿಶೇಷ ಪಾಸ್‌ಗಳನ್ನೂ ನೀಡಲಾಗುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ. ರನ್‌ವೇ ಪ್ರದೇಶದಲ್ಲಿ ಮೆರವಣಿಗೆ ಹಾದುಹೋಗುವಾಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯೋದರು ಭದ್ರತೆ ಒದಗಿಸುತ್ತಾರೆ.

‘ಇಂಥ ಪದ್ಧತಿ ವಿಶ್ವದ ಇತರ ಯಾವುದೇ ಭಾಗದ ವಿಮಾನ ನಿಲ್ದಾಣದಲ್ಲಿ ಅನುಸರಿಸುವ ಬಗ್ಗೆ ನಮಗೆ ಮಾಹಿತಿ ಇಲ್ಲ’ ಎಂದಿದ್ದಾರೆ ತಿರುವನಂತಪುರ ವಿಮಾನ ನಿಲ್ದಾಣದ ನಿರ್ದೇಶಕ ಜಾರ್ಜ್‌ ಜಿ. ತಾರಕನ್.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry