ಅಂದಕ್ಕೆ ಪುದೀನಾ ಮದ್ದು

ಬುಧವಾರ, ಮೇ 22, 2019
29 °C

ಅಂದಕ್ಕೆ ಪುದೀನಾ ಮದ್ದು

Published:
Updated:
ಅಂದಕ್ಕೆ ಪುದೀನಾ ಮದ್ದು

ಕಾಂತಿಯುತ ತ್ವಚೆಯತ್ತ ಪ್ರತಿಯೊಬ್ಬರೂ ಗಮನ ಹರಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳುಳ್ಳ ಬ್ಯೂಟಿ ಕ್ರೀಂಗಳನ್ನು ಹೆಚ್ಚೆಚ್ಚು ಬಳಸುವ ಬದಲು ಮನೆಯಲ್ಲೇ ಇರುವ ವಸ್ತುಗಳಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಉಪಯುಕ್ತ. ಅಂಥ ವಸ್ತುಗಳಲ್ಲಿ ಪುದೀನಾ ಕೂಡ ಒಂದು.

*ಒಂದು ಕಪ್‌ ಹರಳು ಸಕ್ಕರೆ, 1/3 ಕಪ್‌ ತೆಂಗಿನ ಎಣ್ಣೆ, ಒಂದು ಚಮಚ ಗ್ರೀನ್‌ ಟೀ ಪೌಡರ್‌, ಆರು ಹನಿ ಪುದೀನಾ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ, ಇದನ್ನು ಬಾಡಿ ಸ್ಕ್ರಬ್‌ ರೀತಿಯಲ್ಲಿ ಬಳಸಬಹುದು. ಇದು ತ್ವಚೆಯಲ್ಲಿ ತೇವಾಂಶ ಹೆಚ್ಚಿಸಿ ಕಾಂತಿಯನ್ನು ನೀಡುತ್ತದೆ.

*ಪುದೀನಾ ಎಲೆಯನ್ನು ಚೆನ್ನಾಗಿ ಅರೆದು ಅದಕ್ಕೆ ಜೇನುತುಪ್ಪ ಸೇರಿಸಿ ಫೇಸ್‌ ಪ್ಯಾಕ್‌ ಮಾಡಿಕೊಳ್ಳಿ. ಇದು ತ್ವಚೆಗೆ ಶಕ್ತಿ ನೀಡಿ ಚರ್ಮದಲ್ಲಿರುವ ಎಣ್ಣೆ ಜಿಡ್ಡನ್ನು ಹೋಗಲಾಡಿಸುತ್ತದೆ. ಚರ್ಮ ಹೊಳೆಯುವಂತೆ ಮಾಡುತ್ತದೆ.

*ಪುದೀನಾ ಎಲೆಯನ್ನು ರೋಸ್‌ ವಾಟರ್‌ನೊಂದಿಗೆ ರುಬ್ಬಿ ಮೊಡವೆಗೆ ಹಚ್ಚಿ. ಹೆಚ್ಚು ಮೊಡವೆ ಸಮಸ್ಯೆ ಇದ್ದಲ್ಲಿ ರಾತ್ರಿ ಮಲಗುವಾಗ ಹಚ್ಚಿ ಬೆಳಿಗ್ಗೆ ಮುಖ ತೊಳೆದುಕೊಳ್ಳಿ. ಇದು ಮೊಡವೆಯನ್ನು ಹೋಗಲಾಡಿಸುವುದಷ್ಟೇ ಅಲ್ಲ, ಈ ಸಮಸ್ಯೆ ಮತ್ತೆ ಮತ್ತೆ ಬಾರದಂತೆ ತಡೆಯುತ್ತದೆ.

*ಪುದೀನಾ ಪೇಸ್ಟ್‌ ಅಥವಾ ಪುದೀನಾ ಜ್ಯೂಸ್‌ ಅನ್ನು ಕಣ್ಣಿನ ಕೆಳಗೆ ಹಚ್ಚುವುದರಿಂದ ಕಪ್ಪು ವರ್ತುಲ ಕಡಿಮೆಯಾಗತ್ತದೆ.

*ಪುದೀನಾ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ ಹೇನು ಮಾಯ.

*ಪುದೀನಾ ಎಲೆಯನ್ನು ನೀರಿನಲ್ಲಿ ಕುದಿಸಬೇಕು. ನಂತರ ತಡೆದುಕೊಳ್ಳಲು ಸಾಧ್ಯವಿರುವಷ್ಟು ಬಿಸಿ ಇರುವಾಗ ಪಾದವನ್ನು ಅದರಲ್ಲಿ ನೆನೆಸಬೇಕು. ಇದರಿಂದ ಕಾಲು ಒಡಕು ಕಡಿಮೆಯಾಗುತ್ತದೆ.

*ಪುದೀನಾ ನೀರಿನಿಂದ ಕೂದಲು ತೊಳೆದರೆ ಕೂದಲು ಹೊಳಪು ಪಡೆಯುತ್ತದೆ.

*ಬಿಸಿಲಿನಿಂದ ಚರ್ಮ ಕಪ್ಪಾಗಿದ್ದರೆ ಪುದೀನಾ ಜ್ಯೂಸ್‌ಗೆ ಅರಿಶಿನ ಸೇರಿಸಿ ಹಚ್ಚಿಕೊಳ್ಳಬಹುದು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry